ಹಲಸಿನ ಘಮ ಘಮ…!

ಇಂದಿನಿoದ ಮೂರುದಿನಗಳ ಕಾಲ ಹಲಸು ಹಬ್ಬ

ಮೂಡುಬಿದಿರೆ: ಅಬ್ಬಬ್ಬಾ…ಹೌದು ಇಂದಿನಿoದ ಘಮ ಘಮಿಸುವ ಹಲಸಿನ ಹಣ್ಣುಗಳ ಕಾರ್ಬಾರ್! ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಕೃಷಿ ಸಿರಿ ವೇದಿಕೆಯಲ್ಲಿ ಬೃಹತ್ ಹಲಸು ಮೇಳ ನಡೆಯಲಿದೆ. ಹಲವು ವರುಷಗಳಿಂದ ಆಳ್ವಾಸ್ ಸಮೂಹ ಸಂಸ್ಥೆ ಆಯೋಜಿಸುವ ಹಲಸು ಮೇಳಕ್ಕೆ ಎಲ್ಲಿಲ್ಲದ ಬೇಡಿಕೆ. ಆಳ್ವಾಸ್ ನಲ್ಲಿ ಮೇಳ ಇದೆಯೆಂದರೆ ಇಡೀ ರಾಜ್ಯವ್ಯಾಪ್ತಿಯಿಂದ ಜನರಾಗಮಿಸುತ್ತಾರೆ. ಆ ರೀತಿಯಲ್ಲಿ ಮೇಳ ನಡೆಯುತ್ತದೆ. ಹಲವು ವೈವಿಧ್ಯತೆಗಳಿರುತ್ತವೆ, ವಿವಿಧ ತಳಿಯ ಹಲಸುಗಳು ಮೇಳಕ್ಕೆ ಬರುತ್ತವೆ, ನೋಡಲು ಸಾಕಷ್ಟು ವಸ್ತು ವಿಚಾರಗಳಿರುತ್ತವೆ. ಇವೆಲ್ಲವೂ ಈ ಮೇಳದ ವಿಶೇಷತೆ. ಈ ಕಾರಣಕ್ಕಾಗಿಯೇ ಸಹಜವಾಗಿ ಜನರು ಆಕರ್ಷಿತರಾಗುತ್ತಾರೆ.


ಮೂರು ದಿನಗಳ ಮೇಳ: ಮೂಡುಬಿದಿರೆಯ ಮುಂಡ್ರುದೆ ಗುತ್ತು ಕೆ.ಅಮರನಾಥ ಶೆಟ್ಟಿ ಸಭಾಂಗಣದ ಕೃಷಿಸಿರಿ ವೇದಿಕೆಯಲ್ಲಿ ಮೂರು ದಿನಗಳ ಕಾಲ ಈ ಮೇಳ ನಡೆಯಲಿದ್ದು, ಹಲಸಿನ ವೈವಿಧ್ಯಮಯ ಖಾದ್ಯಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಮೇಳದ ಮೆರುಗನ್ನು ಹೆಚ್ಚಿಸಲು ರಾಜ್ಯದ ವಿವಿಧ ಭಾಗಗಳಿಂದ ನುರಿತ ಮಾರಾಟಗಾರರು ಆಗಮಿಸುತ್ತಿದ್ದು, ವಿಶೇಷ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹಲಸಿನ ಹಣ್ಣಿನ ಸೋಫ್ಟಿ, ಜಾಮ್, ಉಪ್ಪಿನಕಾಯಿ, ಮಾವಿನ ಹಣ್ಣಿನ ಸ್ವೀಟ್ ಉಪ್ಪಿನಕಾಯಿ, ಹುಣಸೆಹುಳಿ ಚಟ್ನಿ ಸೇರಿದಂತೆ ಹತ್ತಾರು ಬಗೆಯ ತಿಂಡಿ ತಿನಿಸುಗಳು ಲಭ್ಯವಿವೆ.ಕೇರಳದಿಂದ ಹಲಸಿನ ೭೦ ಖಾದ್ಯಗಳು ಮೇಳದ ವಿಶೇಷ ಆಕರ್ಷಣೆಯಾಗಿದೆ.


ಸೀರೆಗಳು ಇವೆ: ಇಷ್ಟೇ ಅಲ್ಲದೆ ಮೇಳದಲ್ಲಿ ಪಾರಂಪರಿಕ ಇಳಕಲ್ ಮತ್ತು ಖಾದಿ ಸೀರೆಗಳು, ಮಣ್ಣಿನ ಆಭರಣಗಳು, ಬಿದಿರಿನ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ಮಳಿಗೆಗಳು ಗ್ರಾಹಕರನ್ನು ಸೆಳೆಯಲಿವೆ. ಕೃಷಿ ಆಸಕ್ತರಿಗಾಗಿ ಹಲಸು, ಮಾವು ಹಾಗೂ ಹೂವಿನ ಗಿಡಗಳ ಮಾರಾಟವೂ ಇರಲಿದೆ. ಮೇಳಕ್ಕೆ ಸಾಂಸ್ಕೃತಿಕ ಕಳೆ ನೀಡಲು ಭಜನಾ ಸಪ್ತಸ್ವರ ಭಜನಾ ಸ್ಪರ್ಧೆ, ವಾಯ್ಸ್ ಆಫ್ ಬೆದ್ರ ಸಂಗೀತ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಣ್ಣ ಉದ್ಯಮಿಗಳಿಗೆ ಮತ್ತು ಗೃಹ ಉತ್ಪನ್ನ ತಯಾರಕರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಸಂಘಟನೆಗಳ ಸಹಕಾರ: ಬೃಹತ್ ಹಲಸು ಮೇಳದ ಯಶಸ್ಸಿಗಾಗಿ ಸ್ಥಳೀಯ ಹಲವಾರು ಪ್ರಮುಖ ಸಂಘ ಸಂಸ್ಥೆಗಳು ಕೈಜೋಡಿಸಿವೆ. ರೋಟರಿ ಕ್ಲಬ್ ಮೂಡುಬಿದಿರೆ, ರೋಟರಿ ಟೆಂಪಲ್ ಟೌನ್ ಮೂಡುಬಿದಿರೆ, ರೋಟರಿ ಮಿಡ್ ಟೌನ್ ಮೂಡುಬಿದಿರೆ, ಇನ್ನರ್ ವ್ಹೀಲ್ ಮೂಡುಬಿದಿರೆ ಹಾಗೂ ಲಯನ್ಸ್ ಕ್ಲಬ್ ಮೂಡುಬಿದಿರೆ ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿವೆ. ಇದರೊಂದಿಗೆ ಯುವವಾಹಿನಿ ಮೂಡುಬಿದಿರೆ ಘಟಕ, ಜವನೆರ್ ಬೆದ್ರ ಫೌಂಡೇಶನ್ ಮೂಡುಬಿದಿರೆ, ನೇತಾಜಿ ಬ್ರಿಗೇಡ್ ಮೂಡುಬಿದಿರೆ ಹಾಗೂ ಬೆದ್ರ ಫ್ರೆಂಡ್ಸ್ ಮೂಡುಬಿದಿರೆ ಸಂಸ್ಥೆಗಳು ಕೂಡಾ ಸಾಥ್ ನೀಡಿವೆ.

ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ, ತ್ರಿಶೂಲ್ ಫ್ರೆಂಡ್ಸ್ ಮೂಡುಬಿದಿರೆ, ಮಾರಿಗುಡಿ ಫ್ರೆಂಡ್ಸ್ ಮೂಡುಬಿದಿರೆ, ದೊಡ್ಡನೆ ಫ್ರೆಂಡ್ಸ್ ಮೂಡುಬಿದಿರೆ, ಪುತ್ತಿಗೆ ಫ್ರೆಂಡ್ಸ್ ಮೂಡುಬಿದಿರೆ ಹಾಗೂ ಬೆಟ್ಟೇರಿ ಫ್ರೆಂಡ್ಸ್ ಮೂಡುಬಿದಿರೆ ಸಂಘಟನೆಗಳು ಮೇಳದೊಂದಿಗೆ ಸಹಕರಿಸುತ್ತಿವೆ. ಕ್ರೀಡಾ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಎಂ ಬಿ ಇಲೆವೆನ್ ಮೂಡುಬಿದಿರೆ, ಫ್ರೆಂಡ್ಸ್ ಇಲೆವೆನ್ ಮೂಡುಬಿದಿರೆ ಹಾಗೂ ಬೋಲ್ಪು ಚಾರಿಟೇಬಲ್ ಟ್ರಸ್ಟ್ ಮೂಡುಬಿದಿರೆ ಸಂಘಟನೆಗಳ ಬೆಂಬಲವೂ ಈ ಮೇಳಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮೂಡುಬಿದಿರೆ, ನವಚೇತನ ಸೇವಾ ಬಳಗ ಮೂಡುಬಿದಿರೆ, ಬಂಟರ ಸಂಘ ಮಹಿಳಾ ಘಟಕ ಮೂಡುಬಿದಿರೆ ಮತ್ತು ಪ್ರೆಸ್ ಕ್ಲಬ್ ಮೂಡುಬಿದಿರೆ ಸಂಸ್ಥೆಗಳು ಮೇಳಕ್ಕೆ ಅಗತ್ಯವಿರುವ ಸಹಕಾರ ಒದಗಿಸಿವೆ. ಇದಲ್ಲದೆ ಆಟೋ ಡ್ರೈವರ್ಸ್ ಅಸೋಸಿಯೇಷನ್ ಮೂಡುಬಿದಿರೆ, ಮೊಬೈಲ್ ರಿಟೇಲರ್ಸ್ ಮೂಡುಬಿದಿರೆ, ಲಾಡಿ ಫ್ರೆಂಡ್ಸ್ ಮೂಡುಬಿದಿರೆ, ಹೊಸಕನಸು ಸೇವಾ ಟ್ರಸ್ಟ್ ನೆಲ್ಲಂಗಾಡಿ ಹಾಗೂ ನಮೋ ಫ್ರೆಂಡ್ಸ್ ನೆಲ್ಲಂಗಾಡಿ ಸಂಸ್ಥೆಗಳು ಈ ಮೇಳದ ಯಶಸ್ಸಿಗೆ ಸಹಕಾರ ನೀಡುತ್ತಿವೆ.
ನೀವೂ ಬನ್ನಿ: ಈ ಮೇಳ ಎಲ್ಲ ಮೇಳಗಳಿಗಿಂತ ವಿಭಿನ್ನವಾಗಿದೆ. ಇಲ್ಲಿ ನೋಡಲು, ಕಲಿಯಲು,ಸವಿಯಲು ಅವಕಾಶವಿದೆ. ಹಾಗಾಗಿ ಎಲ್ಲರೂ ಮೇಳದಲ್ಲಿ ಪಾಲ್ಗೊಳ್ಳಬೇಕೆಂಬುದು ಸಂಘಟಕರ ಆಶಯ.

Share

Leave a Reply

Your email address will not be published. Required fields are marked *