ಮೂಡುಬಿದಿರೆ: ನ.15ರಂದು ‘ಸ್ವರ್ಣ ಧಾಮ’ ಹಿರಿಯ ನಾಗರಿಕರ ವಸತಿ ಬಡಾವಣೆಯ ಮುಖ್ಯದ್ವಾರ, ಮಾದರಿ ಮನೆ ಶಂಕುಸ್ಥಾಪನೆ
ಮೂಡುಬಿದಿರೆ: ಗ್ರಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ‘ಸ್ವರ್ಣ ಧಾಮ’ ಹಿರಿಯ ನಾಗರಿಕರ ವಸತಿ ಬಡಾವಣೆಯ ಮುಖ್ಯದ್ವಾರ ಹಾಗೂ ಮಾದರಿ ಮನೆಯ ಶಂಕುಸ್ಥಾಪನಾ ಕಾರ್ಯಕ್ರಮ ನವೆಂಬರ್ 15ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ ಪ್ರೈ.ಲಿ ಅಧ್ಯಕ್ಷ ಬಾಲಕೃಷ್ಣ ಶರ್ಮ ನೆರೋಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಆಯರಬೆಟ್ಟು, ಬೈಲಬರಿ ರಸ್ತೆ, ಕೆಸರ್ಗದ್ದೆ ಪ್ರದೇಶದಲ್ಲಿ ಈ ವಸತಿ ಬಡಾವಣೆ ರೂಪುಗೊಳ್ಳಲಿದ್ದು, ಹಿರಿಯ ನಾಗರಿಕರಿಗೆ ಅನುಕೂಲಕರವಾದ ವಸತಿ ವ್ಯವಸ್ಥೆ ಕಲ್ಪಿಸುವ ಉದ್ದೇಶವನ್ನು ಹೊಂದಿದೆ ಎಂದರು.

ಕಾರ್ಯಕ್ರಮದ ಶಂಕುಸ್ಥಾಪನೆಯನ್ನು ಗುರುಪುರ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೆರವೇರಿಸಲಿದ್ದಾರೆ. ಕಾಂಕ್ರೀಟ್ ರಸ್ತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಶ್ರೀ ಜಗದೀಶ್ ಕೆ. ಶೇಣವ, ಹಾಗೂ ಸಹಕಾರಿ ರತ್ನ ಶ್ರೀ ಭಾಸ್ಕರ ಎನ್. ಕೋಟ್ಯಾನ್ ಭಾಗವಹಿಸಲಿದ್ದಾರೆ. ಗ್ರಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ.ಯ ಗೌರವ ಸಲಹೆಗಾರರಾದ ನೆರೋಳು ಈಶ್ವರ ಭಟ್ ಅಧ್ಯಕ್ಷತೆ ವಹಿಸುವರು.

ಸ್ವರ್ಣಧಾಮವು ಹಿರಿಯರು ಮತ್ತು ಪ್ರೀತಿಪಾತ್ರರಿಗೆ ಒತ್ತಡಮುಕ್ತ ಮತ್ತು ಪ್ರಶಾಂತ ಸಮುದಾಯ ಆಧಾರಿತ ಜೀವನಕ್ಕಾಗಿ ಅವರ ಬಜೆಟಿಗೆ ಅನುಗುಣವಾಗಿ ಫ್ಲಾಟ್ ನ ಗಾತ್ರ, ಮನೆಯ ಗಾತ್ರ ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ವಿವಿಧ ಗಾತ್ರದ ಫ್ಲಾಟ್‌ಗಳು, ಕಸ್ಟಮೈಸ್ಡ್ ಮನೆಗಳು, ಆರೋಗ್ಯ ತಪಾಸಣೆ, ಮೂಲಭೂತ ಸೌಲಭ್ಯಗಳು, ಹೈ ಸ್ಪೀಡ್ ಇಂಟರ್ ನೆಟ್, ಎಲೆಕ್ಟ್ರಿಕ್ ಬಗ್ಗಿಗಳ ವ್ಯವಸ್ಥೆ, ಹಿರಿಯ ನಾಗರೀಕರಿಗೆ ಸಹಾಯ, ಆರೋಗ್ಯಕರ ಆಹಾರ, ಮನರಂಜನಾ ಪ್ರದೇಶ, ವಾಕಿಂಗ್ ಟ್ರಾಕ್ ಮತ್ತು ಪಾರ್ಕ್, ಭದ್ರತೆ, ನಗರ ಪ್ರವಾಸಗಳು ಹೀಗೆ ಹಲವು ವೈವಿಧ್ಯತೆಗಳನ್ನು ಒಳಗೊಂಡಿವೆ. ಯೋಗ ಹಾಗೂ ಧ್ಯಾನ ಮಂದಿರಗಳಿವೆ. ಅತ್ಯುತ್ತಮ ಸುಮುದಾಯ ಜೀವನಕ್ಕೆ ಅವಕಾಶವಿದೆ. ಭವಿಷ್ಯಕ್ಕಾಗಿ ಒಂದು ಸ್ಮಾರ್ಟ್ ಹೂಡಿಕೆಯ ರೀತಿಯಲ್ಲೂ ಇದನ್ನು ಬಳಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇಷ್ಟೇ ಅಲ್ಲದೆ, ಮರಳಿ ಖರೀದಿಸುವ ವಿಶೇಷ ಸೌಲಭ್ಯ ಈ ಸ್ವರ್ಣಧಾಮದಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ., ಪಂಪ್‌ವೆಲ್, ಮಂಗಳೂರು. ಸಂಪರ್ಕ: 9110689121.