ಪಿಎನ್‌ಬಿ ಮೆಟ್‌ಲೈಫ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮಂಗಳೂರು ನಗರ ಶಾಖೆಯ ಪ್ರಬಂಧಕ; ಸಹೋದ್ಯೋಗಿಗಳು, ಸಿಬ್ಬಂದಿ ಹಾಗೂ ಹಿತೈಷಿಗಳಿಂದ ಪ್ರೀತಿಪೂರ್ವಕ ಅಭಿನಂದನೆ
ಮಂಗಳೂರು: ಪಿಎನ್‌ಬಿ ಮೆಟ್‌ಲೈಫ್ ಇನ್ಶೂರೆನ್ಸ್ ಕಂಪೆನಿಯ ಮಂಗಳೂರು ನಗರ ಶಾಖೆಯ ಶಾಖಾ ಪ್ರಬಂಧಕ ಸುರೇಶ್ ಕುಮಾರ್ ವಧ್ವ ಅವರು ಸುದೀರ್ಘ ಸೇವೆಯ ಬಳಿಕ ಇಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಮೂಲತಃ ವಿಟ್ಲ ಸಮೀಪದವರಾದ ಸುರೇಶ್ ಕುಮಾರ್ ಅವರು ವಿಮಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದು, ವಿವಿಧ ಸಂಸ್ಥೆಗಳಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅಪಾರ ಅನುಭವ ಗಳಿಸಿರುವ ಅವರು, ಪಿಎನ್‌ಬಿ ಮೆಟ್‌ಲೈಫ್ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಇದೀಗ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ.

ಇಂದು ಬೀಳ್ಕೊಡುಗೆ ಸಮಾರಂಭ:
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪದಲ್ಲಿರುವ ಪಿಎನ್‌ಬಿ ಮೆಟ್‌ಲೈಫ್ ಕಚೇರಿಯಲ್ಲಿ ಇಂದು ಸಂಜೆ ಸುರೇಶ್ ಕುಮಾರ್ ವಧ್ವ ಅವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಸಂಸ್ಥೆಯ ಪ್ರಮುಖರು, ಸಹೋದ್ಯೋಗಿಗಳು, ಸಿಬ್ಬಂದಿ ವರ್ಗ ಹಾಗೂ ಹಣಕಾಸು ಸಲಹೆಗಾರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುರೇಶ್ ಕುಮಾರ್ ಅವರ ಮುಂದಿನ ನಿವೃತ್ತಿ ಜೀವನ ಸುಖ, ಶಾಂತಿ, ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಸಹೋದ್ಯೋಗಿಗಳು, ಸಿಬ್ಬಂದಿ ವರ್ಗ, ಹಣಕಾಸು ಸಲಹೆಗಾರರು ಮತ್ತು ಹಿತೈಷಿಗಳು ಹಾರೈಸಿದ್ದಾರೆ.