ಮಳೆ ಬಂತೂ ಮಳೆ…ಮಳೆ…ಮಳೆ

ಮೂಡುಬಿದಿರೆ: ಮಳೆ ತಂಪೆರೆದಿದೆ. ಇಳೆ ತಂಪಾಗಿದೆ. ಮೂಡುಬಿದಿರೆಯಲ್ಲಿ ಉತ್ತಮ ಮಳೆಯಾಗಿದೆ. ಜನತೆ ಕೊಂಚ ನೆಮ್ಮದಿಯಿಂದಿದ್ದಾರೆ. ಹೌದು ಇದು ಮೂಡುಬಿದಿರೆ ಪರಿಸರದ ಶುಕ್ರವಾರ ಹಾಗೂ ಗುರುವಾರದ ಹವಾಮಾನ.
ಮುಂಗಾರು ಪೂರ್ವ ಮಳೆ ಮೂಡುಬಿದಿರೆ ಪರಿಸರದಲ್ಲಿ ಸುರಿದಿದೆ. ಗುರುವಾರ ಬೆಳ್ಳಂ ಬೆಳಗ್ಗಿನಿಂದ ಬಾನು ಕಪ್ಪಿಟ್ಟಿದ್ದು, ಗಂಟೆ ಎಂಟಾಗುತ್ತಿದ್ದoತೆಯೇ ಮಳೆ ಸುರಿಯತೊಡಗಿದೆ.

ಮಳೆಯ ಸಿಂಚನ

ಮೂಡುಬಿದಿರೆ ತಾಲೂಕಿನ ಬಹುತೇಕ ಎಲ್ಲಾ ಕಡೆಗಳಲ್ಲೂ ಮಳೆಯಾಗಿದೆ. ಸುಮಾರು ಒಂದೂವರೆ ತಾಸುಗಳ ಕಾಲ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾದರೆ, ಕೆಲವು ಕಡೆಗಳಲ್ಲಿ ಕ್ಷೀಣವಾಗಿತ್ತು. ಒಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಜನತೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಭಾರೀ ಪ್ರಮಾಣದಲ್ಲಿ ಬಿಸಿಲ ಬೇಗೆ ಹೆಚ್ಚಿದ್ದು, ಜನತೆ ಅಕ್ಷರಶಃ ಕಂಗಾಲಾಗಿದ್ದರು. ಮಳೆ ಇಳೆಗೆ ತಂಪೆರೆದಿದೆ. ಸಂಜೆಯ ವೇಳೆಗೆ ವಾತಾವರಣದಲ್ಲಿ ಕೊಂಚ ತಣ್ಣಗಿನ ಅನುಭವ ಉಂಟಾಗಿದೆ. ತೀವ್ರ ನೀರಿನ ಅಭಾವದಿಂದಾಗಿ ಗಿಡಮರಗಳು ಸೊರಗಿದ್ದು, ಇದೀಗ ಮಳೆಯಿಂದಾಗಿ ಕೊಂಚ ನೆಮ್ಮದಿಯಾಗುವಂತಾಗಿದೆ.
ದಿನಪೂರ್ತಿ ಮೋಡಕವಿದ ವಾತಾವರಣ ಪರಿಸರದಲ್ಲಿತ್ತು. ರಾತ್ರಿಯೂ ಉತ್ತಮ ಮಳೆಯಾಗಿದೆ.

Share

Leave a Reply

Your email address will not be published. Required fields are marked *