ಮನ್ ಕೀ ಬಾತ್ ವೀಕ್ಷಿಸಿದ ಶಾಸಕ ಕೋಟ್ಯಾನ್

ಮೂಡುಬಿದಿರೆ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸ್ವಗೃಹದಲ್ಲಿ ವೀಕ್ಷಿಸಿದರು. ೨೦೧೪ ಅಕ್ಟೋಬರ್ ನಿಂದ ಈ ಕಾರ್ಯಕ್ರಮ ತನ್ನ ಪ್ರಸಾರ ಆರಂಭಿಸಿದ್ದು ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ದೂರದರ್ಶನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ಗಳಲ್ಲಿ ಮುಖ್ಯವಾಗಿ ಹಿಂದಿ (ಇತರ ಭಾಷೆಗಳಲ್ಲೂ ಅನುವಾದ ಲಭ್ಯ) ಪ್ರಸಾರವಾಗುವಂತಹ ಕಾರ್ಯಕ್ರಮ ಇದಾಗಿದ್ದು, ಆರಂಭದಿAದಲೂ ಇದನ್ನು ಕೇಳುವುದಾಗಿ ಶಾಸಕ ಕೋಟ್ಯಾನ್ ಹೇಳಿದ್ದಾರೆ. ದೇಶದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಮನ್ ಕೀ ಬಾತ್ ನಡೆಸುತ್ತಿದ್ದಾರೆ. ಇಂತಹ ಅದ್ಭುತ ಚಿಂತನೆ ಬೇರೆ ಯಾರಿಗೂ ಬರಲು ಸಾಧ್ಯವೇ ಇಲ್ಲ. ಇದರಿಂದಾಗಿ ದೇಶದ ಪ್ರಗತಿಯ ಜೊತೆಗೆ, ಹಲವಾರು ವಿಚಾರಗಳು ಸುಲಭವಾಗಿ ಜನತೆಗೆ ತಲುಪಿದಂತಾಗುತ್ತದೆ ಎಂದು ಕೋಟ್ಯಾನ್ ವ್ಯಾಖ್ಯಾನಿಸಿದ್ದಾರೆ.

ಜಾಹೀರಾತು
Share

Leave a Reply

Your email address will not be published. Required fields are marked *