ವಿಮಾನ ಸದ್ದಿಗೆ ಬೆಚ್ಚಿ ಬಿದ್ದ ಜನತೆ

ಮೂಡುಬಿದಿರೆಯಲ್ಲಿ ಹಾರಿತು ವಿಮಾನ

ಮೂಡುಬಿದಿರೆ: ಭಾರೀ ಸದ್ದು ಮಾಡುತ್ತಾ ಪುಟ್ಟ ವಿಮಾನವೊಂದು ಮೂಡುಬಿದಿರೆಯ ಆಗಸದ ಮೇಲೆ ೩.೩೫ರ ಸುಮಾರಿಗೆ ಹಾರಿದ್ದು, ಜನತೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅತ್ತ ಯುದ್ಧದ ಕಾರ್ಮೋಡ ಒಂದೆಡೆಯಾದರೆ, ಇದೀಗ ಯುದ್ಧ ವಿಮಾನವನ್ನು ಹೋಲುವ ವಿಮಾನ ಹಾರಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ವಿಮಾನದ ಭೀಕರ ಸದ್ದಿಗೆ ಬೆಚ್ಚಿ ಬಿದ್ದ ಜನ ಮನೆಯಿಂದ ಹೊರಬಂದು ಆಗಸ ನೋಡುವಂತಾಗಿದೆ. ಮೂಡುಬಿದಿರೆಯ ಆಗಸದಲ್ಲಿ ಒಂದು ಪ್ರದಕ್ಷಿಣೆ ಹಾಕಿದ ವಿಮಾನ ಮತ್ತೆ ಕಣ್ಮರೆಯಾಗಿದೆ.


ವಿಮಾನದ ಈ ಹಾರಾಟ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಸುಖೋಯ್ ಅಥವಾ ಮಿಗ್ ಏರ್ ಕ್ರಾಫ್ಟ್ ಮಾದರಿಯ ವಿಮಾನ ಹಾರಾಟವಾಗಿದ್ದು ಅತ್ಯಂತ ವೇಗವಾಗಿ ಹಾರಿದ ಪರಿಣಾಮ ಸರಿಯಾಗಿ ಪತ್ತೆ ಮಾಡಲು ಸಾಧ್ಯವಾಗಿಲ್ಲ.

Share

Leave a Reply

Your email address will not be published. Required fields are marked *