ರಾಣಿ-ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ

ನವದೆಹಲಿ: ಇಡೀ ಭರತಖಂಡದಲ್ಲಿ ೧೫೫೨ ರಿಂದ ೧೬೦೬ ರವರೆಗೆ ೫೪ ವರ್ಷಗಳ ಸುದೀರ್ಘಕಾಲ ರಾಜ್ಯಭಾರ ನಡೆಸಿದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಪ್ರಕಟಸಿದ ವಿಶೇಷ ಅಂಚೆ ಚೀಟಿಯ ಲೋಕಾರ್ಪಣೆಯ ಐತಿಹಾಸಿಕ ಕರ‍್ಯಕ್ರಮ ನವದೆಹಲಿಯ ರಾಷ್ಟçಪತಿ ಭವನದಲ್ಲಿ ನಡೆಯಿತು. ಗೌರವಾನ್ವಿತ ರಾಷ್ಟçಪತಿ ದ್ರೌಪದಿ ಮುರ್ಮುಅವರು ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ರಾಷ್ಟçಪತಿಗಳು ರಾಣಿ ಚೆನ್ನಭೈರಾದೇವಿಯ ಕೊಡುಗೆಗಳನ್ನು ಸ್ಮರಿಸಿಕೊಂಡುರು.

ರಾಷ್ಟçಪತಿಗಳು ತಮ್ಮ ಸಂದೇಶದಲ್ಲಿ, ರಾಣಿ ಚೆನ್ನಭೈರಾದೇವಿಯ ಧೈರ್ಯ ಸ್ಥೆöÊರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ರಾಣಿ ಚೆನ್ನಭೈರಾದೇವಿಯ ನಾಡಿನ ರಕ್ಷಣೆಗಾಗಿ ಆಕೆ ನಡೆಸಿದ ಹೋರಾಟ, ಸಾಮಾಜಿಕ ಕಾಳಜಿ, ಜಾತ್ಯತೀತ ಮನೋಭಾವ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಆಕೆ ಕೈಕೊಂಡ ರಾಜನೀತಿಗಳನ್ನು ಮುಕ್ತಕಂಠದಿAದ ಪ್ರಶಂಶಿಸಿದರು. ಅಂಚೆಚೀಟಿ ಹೊರತಂದ ಭಾರತೀಯ ಅಂಚೆ ಇಲಾಖೆ ಹಾಗೂ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳನ್ನು ಅಭಿನಂದಿಸಿದರು.


ಕಾರ್ಯಕ್ರಮದ ಆರಂಭದಲ್ಲಿ ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅತಿಥಿಗಣ್ಯರನ್ನು ಸ್ವಾಗತಿಸುತ್ತ ರಾಣಿ ಚೆನ್ನಭೈರಾದೇವಿಯ ಶೌರ್ಯ, ದೃಢ ನಿರ್ಧಾರ ಮತ್ತು ಆಡಳಿತ ಕೌಶಲ್ಯವನ್ನು ಸ್ಮರಿಸಿದರು. ರಾಣಿ ಚೆನ್ನಭೈರಾದೇವಿ ವಾಣಿಜ್ಯ ಮತ್ತು ನೌಕಾಯಾನದಲ್ಲಿ ದಿಟ್ಟ ಹೆಜ್ಜೆ ಇಟ್ಟ ಹೆಗ್ಗುರುತು ಸ್ವರೂಪ ಎಂದು ಅವರು ಹೇಳಿದರು.   ರೈತರು ಮತ್ತು ಮೀನುಗಾರರ ನೆಮ್ಮದಿಗೆ ಹಲವಾರು ಸಾಮಾಜಿಕ ಸೌಲಭ್ಯಗಳನ್ನು ನೀಡಿದಳು ಎಂಬುದನ್ನು ಜೋಷಿ ತಿಳಿಸಿದರು. ಇಂತಹ ಮಹಾನ್ ಮಹಿಳೆಯ ನೆನಪಿಗಾಗಿ ಸ್ಮಾರಕ ಅಂಚೆಪಟ್ಟಿ ಬಿಡುಗಡೆ ಮಾಡುವುದು ಹೆಮ್ಮೆಯ ವಿಚಾರ ಎಂದು ಅವರು ಅಭಿಪ್ರಾಯಪಟ್ಟರು.

ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕರ‍್ಯದರ್ಶಿ  ರಶ್ಮಿತಾ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಣಿ ಚೆನ್ನಭೈರಾದೇವಿಯ ಇತಿಹಾಸ, ವೀರತ್ವ ಹಾಗೂ ಸಮಾಜಮುಖಿ ಕರ‍್ಯಗಳನ್ನು ನೆನಪಿಸಿ ಗೌರವ ಸೂಚಿಸಿದರು. ಅಲ್ಲದೆ ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿಯನ್ನು ಹಾಗೂ ಇಂದಿನ ಕರ‍್ಯಕ್ರಮವನ್ನು ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್, ಮೂಡುಬಿದಿರೆ ಇದರ ಮೂಲಕ ಪ್ರಾಯೋಜಿಸಲಾಗಿದೆ ಎಂಬುದನ್ನೂ ಅವರು ವಿವರಿಸಿದರು.

ಜಾಹೀರಾತು

ಕರ‍್ಯಕ್ರಮಕ್ಕೆ ಮಾರ್ಗದರ್ಶನ ನೀಡಿಸಹಕರಿಸಿದವ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಅವರು “ರಾಜ್ಯ ವಿಸ್ತರಣೆ ರಾಣಿ ಚೆನ್ನ ಭೈರಾದೇವಿಯರಾಜ ನೀತಿಯಾಗಿರಲಿಲ್ಲ. ಬದಲಿಗೆ ಪ್ರಜೆಗಳ ಬದುಕಿಗೆ ಸುಖ ಸೌಲಭ್ಯ ಒದಗಿಸುವುದು ಅವಳ ಉದ್ದೇಶವಾಗಿತ್ತು. ಆಕೆ ವಾಣಿಜ್ಯ ವ್ಯವಹಾರದಲ್ಲಿ ನಿಷ್ಣಾತೆಯಾಗಿದ್ದಳು.ತನ್ನರಾಜ್ಯದಿಂದ, ಕರಿ ಮೆಣಸು, ದಾಲ್ಚಿನ್ನಿ, ಶುಂಠಿ, ಏಲಕ್ಕಿ, ಗಂಧ, ಅಕ್ಕಿ, ಬೆಲ್ಲ, ದಂತ ಮುಂತಾದ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿಅಪಾರ ಪ್ರಮಾಣದ ವಿದೇಶೀ ವಿನಿಮಯಗಳಿಸಿದ್ದಳು. ರಾಜಕೀಯವಾಗಿ ವೈರ ಸಾಧಿಸುತ್ತಿದ್ದ ಪೋರ್ಚುಗೀಸರೊಡನೆ ಉತ್ತಮ ವ್ಯಾವಹಾರಿಕ ಸಂಬ0ಧ ಇರಿಸಿಕೊಂಡು, ಅವರಿಂದಲೇ “ರೈನಾದ ಪೆಮೆಂಟಾ” ಅರ್ಥಾತ್ “ಕರಿಮೆಣಸಿನ ಅರಸಿ” ಎಂಬ ಬಿರುದು ಪಡೆದಿದ್ದಳು.ಅಂಥ ಹೆಮ್ಮೆಯ ವೀರವನಿತೆಗೆಇಂದುದೇಶದದೊಡ್ಡಗೌರವ ಪ್ರಾಪ್ತವಾಗಲಿದೆ” ಎಂದು ಆಶಿಸಿದರು.

ಅಂಚೆ ಚೀಟಿ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಉಪಸ್ಥಿತರಿದ್ದು ಶುಭಕೋರಿದರು. ಕರ‍್ಯಕ್ರಮದಲ್ಲಿ ದೆಹಲಿಯ ಅಂಚೆ ಮಹಾನಿರ್ದೇಶಕರಾದ ಅಖಿಲೇಶ್‌ಕುಮಾರ್ ಪಾಂಡಿಯವರು, ಹುಬ್ಬಳ್ಳಿಯ ಸಾಮಾಜಿಕ ಕರ‍್ಯಕರ್ತರಾದ ಮಹೇಂದ್ರ ಸಿಂಗ್, ಕರಿಮೆಣಸಿನ ರಾಣಿ ಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಖ್ಯಾತ ಲೇಖಕರಾದ ಡಾ.ಗಜಾನನ ಶರ್ಮ, ಸಂಯೋಜಕರಾದ ಹುಬ್ಬಳ್ಳಿಯ ಖ್ಯಾತ ಉದ್ಯಮಿ ಮಹಾವೀರ ಕುಂದೂರ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರೂ ಕರ‍್ಯಕ್ರಮ ಸಂಯೋಜಕರೂ ಆದ ಡಾ. ಬಿ.ಪಿ.ಸಂಪತ್‌ಕುಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

Share

Leave a Reply

Your email address will not be published. Required fields are marked *