ಮೂಡುಬಿದಿರೆ :ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ 4 ನೇ ಶಾಖೆಯು ಜ್ಯೋತಿನಗರ, ಮೆಸ್ಕಾಂ ಕಛೇರಿ ಎದುರುಗಡೆಯ ಮಹಾಲಸ ಕಟ್ಟಡದಲ್ಲಿ ಸೆ.8 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 10:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮುಲ್ಕಿ ಅರಮನೆಯ ಎಂ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವರಾದ ಕೆ ಅಭಯಚಂದ್ರ ಜೈನ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಕಂಪ್ಯೂಟರ್ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಭದ್ರತಾ ಕೊಠಡಿಯನ್ನು ಉದ್ಘಾಟಿಸುವರು. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಅಮೃತ ನಗದು ಪತ್ರ ಠೇವಣಿಯನ್ನು ಹಾಗೂ ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಮೂಡುಬಿದಿರೆ ವಲಯ ಚರ್ಚ್ನ ಪ್ರಧಾನ ಧರ್ಮ ಗುರು ಓನಿಲ್ ಡಿ ಸೋಜಾ ಉಳಿತಾಯ ಖಾತೆಯ ಪಾಸ್ ಪುಸ್ತಕ ವಿತರಣೆ, ಸಿಎಸ್ ಐ ಕ್ರಿಸ್ತ ಶಾಂತಿ ಚರ್ಚ್ ಮೂಡುಬಿದಿರೆ ಸಭಾಪಾಲಕರಾದ ಸಂತೋಷ್ ಕುಮಾರ್ ಮಾಸಿಕ ಠೇವಣಿ ಪತ್ರ, ಪಾವಂಜೆ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸರ‍್ಯ ಕುಮಾರ್ ಪ್ರಥಮ ವಾಹನ ಸಾಲ ಪತ್ರ ವಿತರಣೆ, ಪಡೀಲಿನ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ನಿತ್ಯನಿಧಿ ಪಾಸ್ ಬುಕ್ ವಿತರಣೆ ಮಾಡಲಿದ್ದಾರೆ. ನ್ಯಾಯಾವಾದಿ ಶರತ್ ಡಿ ಶೆಟ್ಟಿ ಪ್ರಿಯದರ್ಶಿನಿ ಸ್ವ – ಸಹಾಯ ಗುಂಪಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಹೆಚ್ ಎನ್ ರಮೇಶ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ, ಶಿರ್ತಾಡಿ ಸಹಕಾರಿ ವ್ಯವಸಾಯಿಕ ಸಂಘದÀ ಅಧ್ಯಕ್ಷ ಪ್ರವೀಣ್ ಕುಮಾರ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಧ್ಯಕ್ಷ ಕುಮಾರ್ ಪೂಜಾರಿ, ಲಯನ್ಸ್ ಕ್ಲಬ್ ವಲಯ ಆಧ್ಯಕ್ಷ ಜೊಸ್ಸಿ ಮೆನೇಜಸ್, ಪುರಸಭೆ ಸದಸ್ಯರಾದ ಇಕ್ಬಾಲ್ ಕರೀಂ, ಕಟ್ಟಡ ಮಾಲೀಕ ದೇವದಾಸ್ ಭಟ್ ಭಾಗವಹಿಸಲಿದ್ದಾರೆ ಎಂದರು. ಹಳೆಯಂಗಡಿಯಲ್ಲಿ ಪ್ರಧಾನ ಶಾಖೆ ಹೊಂದಿದ್ದು, ಪಡುಬಿದ್ರೆ ಮತ್ತು ಕಿನ್ನಿಗೋಳಿಯಲ್ಲಿ ಶಾಖೆ ಕರ‍್ಯನಿರ್ವಹಿಸುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕ ಅಭಿಷ್ಠಾ ಜೈನ್, ಗಣೇಶ್ ಕುಮಾರ್, ಗೌತಮ್ ಜೈನ್, ತನುಜಾ ಶೆಟ್ಟಿ, ಲೋಲಾಕ್ಷಿ ಉಪಸ್ಥಿತರಿದ್ದರು.

ಸೊಸೈಟಿಯು 2021 ರಲ್ಲಿ ಪ್ರಾರಂಭಗೊoಡು ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಹಕಾರಿ ಸಂಘ, ಪಡುಬಿದ್ರೆ ಮತ್ತು ಕಿನ್ನಿಗೋಳಿಯಲ್ಲಿ ಶಾಖೆ ಹೊಂದಿದೆ ಪ್ರಸ್ತುತ 32 ಕೋಟಿ ನಿರಖು ಠೇವಣಿ ಹೊಂದಿದೆ 204-25 ನೇ ಸಾಲಿನಲ್ಲಿ 351.69 ಕೋಟಿ ವಹಿವಾಟು ನಡೆಸಿ ಉತ್ತಮ ದರ್ಜೆಯ ವ್ಯವಹಾರ ಮಾಡಿ ರೂ 41.88 ಲಕ್ಷ ಲಾಭವನ್ನು ಗಳಿಸಿರುತ್ತದೆ. ಹಾಗೂ 98.5% ಸಾಲ ವಸೂಲಾತಿ ನಡೆಸಿ ಲೆಕ್ಕಪರಿಶೋಧನಾ ವರದಿ ಕೂಡಾ ಎ ಶ್ರೇಣಿಯಲ್ಲಿದ್ದು ಹೆಮ್ಮೆ ಪಡುವಂತಾಗಿದೆ. ಸೊಸೈಟಿಯ 3 ಶಾಖೆಗಳಲ್ಲೂ ಇ ಮುದ್ರಾಂಕ ವ್ಯವಸ್ಥೆ ಟಿಜಿಟಲ್ ಬ್ಯಾಂಕಿAಗ್ ವ್ಯವಸ್ಥೆ ಹವಾನಿಯಂತ್ರಿತ ಬ್ಯಾಂಕಿAಗ್ ವಿಭಾಗವನ್ನು ಹೊಂದಿರುತ್ತದೆ. ಪ್ರಸ್ತುತ ಒಟ್ಟು 3843 ಸದಸ್ಯರನ್ನು ಹೊಂದಿರುತ್ತದೆ. ಸಂಘದಲ್ಲಿ 21 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಒಟ್ಟು 17 ನಿರ್ದೇಶಕರ ತಂಡ ಇದೆ. ಇವರೆಲ್ಲರ ಶ್ರಮದಿಂದಲೇ 2023-24 ಮತ್ತು 2024 25 ನೇ ಸಾಲಿನಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿoದ ವಿಶಿಷ್ಟ ಸಾಧನ ಪ್ರಶಸ್ತಿ ದೊರಕಿರುತ್ತದೆ.