ಅಯೋಧ್ಯ ಬಾಲರಾಮ ವಿಗ್ರಹ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರಿಂದ ಲಾಂಛನ ಬಿಡುಗಡೆ
ಪಣಂಬೂರು: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಪ್ರಣಂಬೂರು ಕಡಲು ತೀರದಲ್ಲಿ ನಡೆದ ಜಾನಪದ ಕಡಲೋತ್ಸವ ಕಾರ್ಯಕ್ರಮದಲ್ಲಿ ನೂತನ ಸಂಘಟನೆಯಾದ `ಕ್ಷಾತ್ರತೇಜ ಪ್ರತಿಷ್ಠಾನ’ ಇದರ ಲಾಂಛನ ಬಿಡುಗಡೆ ಮಾಡಲಾಯಿತು. ಪ್ರಸಿದ್ಧ ಶಿಲ್ಪಿ ಅಯೋಧ್ಯೆಯ ಬಾಲ ರಾಮ ವಿಗ್ರಹ ಶಿಲ್ಪಿ ಅರುಣ್ ಯೋಗಿರಜ್ ಲಾಂಛನ ಅನಾವರಣಗೊಳಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಅರುಣ್ ಯೋಗಿರಾಜ್ ಅವರನ್ನು ಕ್ಷಾತ್ರತೇಜ ಪ್ರತಿಷ್ಠಾನದ ಪದಾಧಿಕಾರಿಗಳು ಸನ್ಮಾನಿಸಿದರು.
ಶಾಸಕರಾದ ಭರತ್ ಶೆಟ್ಟಿ, ಕ್ಷಾತ್ರತೇಜ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರವೀಣ್ ಕೊಡಿಯಾಲ್‌ಬೈಲು, ಅಧ್ಯಕ್ಷ ಸತ್ಯನಾರಾಯಣ ಹೂಡೆ, ಪ್ರಧಾನ ಸಂಚಾಲಕ ಅಮರ್ ಕೋಟೆ, ಸಹ ಸಂಚಾಲಕ ಸಂತೋಷ್ ,ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಸಂಘಟನಾ ಕಾರ್ಯದರ್ಶಿ ಅಂಕುಶ್ ಕುಮಾರ್ ಹೂಡೆ
ಕೋಶಾಧಿಕಾರಿ ಸಂತೋಷ್ ಕುಮಾರ್, ಜೊತೆ ಕಾರ್ಯದರ್ಶಿ ಸಂದೀಪ್ ರಾವ್ ಹಾಗೂ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು