ಕಾಸರಗೋಡು: ಕಾಸರಗೋಡು ಜಿಲ್ಲಾ ಕೈಗಾರಿಕಾ ಅತ್ಯುತ್ತಮ ” ಉತ್ಪಾದನಾ ಉದ್ಯಮ ಪ್ರಶಸ್ತಿ ” ಯನ್ನು ಸ್ಕಂದ ಇಂಡಸ್ಟ್ರಿ ಮಾಲಕ ಮುರಳೀ ಕೃಷ್ಣ ಪಡೆದುಕೊಂಡಿದ್ದಾರೆ. ತಿರುವನಂತಪುರದಲ್ಲಿ ಜರಗಿದ ಸಮಾರಂಭದಲ್ಲಿ ಕೇರಳ ಸರಕಾರದ ವ್ಯವಸಾಯ ನಿಯಮ ಮಂತ್ರಿ ಪಿ ರಾಜೀವ್ ಪ್ರಶಸ್ತಿ ನೀಡಿ ಗೌರವಿಸಿ, ಕೈಗಾರಿಕಾ ಕ್ಷೇತ್ರದಲ್ಲಿ ಸ್ಕಂದ ಸಂಸ್ಥೆ ಮಾಡಿದ ಸಾಧನೆಯನ್ನು ಮುಕ್ತಕಂಠದಿ0ದ ಶ್ಲಾಘಿಸಿದ್ದಾರೆ. ಇದೊಂದು ಮಾದರಿ ಕಾರ್ಯ ಎಂದು ಅಭಿನಂದಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ `ಈದಿನ’ ಸುದ್ದಿ ಸಂಸ್ಥೆಯೊ0ದಿಗೆ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಮುರಳೀ ಕೃಷ್ಣ “ನನ್ನನ್ನು ಮತ್ತು ಸಹೋದರ ಹರಿಕೃಷ್ಣನನ್ನು ವಿದ್ಯಾರ್ಥಿಜೀವನದಿಂದ ಔದ್ಯೋಗಿಕ ಬದುಕಿಗೆ ಕಾಲಿರಿಸಲು ಹಾಗೂ ಉತ್ತಮ ನಡತೆಯಿಂದ ಈ ಸಂಸ್ಥೆಯನ್ನು ಕಟ್ಟಿಬೆಳೆಸಲು ಬೆನ್ನೆಲುಬಾಗಿ ನಿಂತವರು ನನ್ನ ಚಿಕ್ಕಪ್ಪ ಪೆರಡಂಜಿ ಗೋಪಾಲಕೃಷ್ಣ ಭಟ್, ಮಾತಾ ಪಿತೃಗಳು, ಗುರುಹಿರಿಯರು, ಮತ್ತು ಮನೆಯವರು ಹಾಗೂ ಬಂಧುಗಳು ಈ ಪ್ರಶಸ್ತಿಗೆ ಸಮಭಾಜನರು” ಎಂದರು.
“ಇಪ್ಪತ್ತೈದು ವರ್ಷಗಳ ಮೊದಲು ಸಂಸ್ಥೆಯನ್ನು ತಮ್ಮ ದಿವ್ಯ ಹಸ್ತದಿಂದ ಉದ್ಘಾಟಿಸಿ ಅನುಗ್ರಹವಿತ್ತ ಎಡನೀರು ಮಠಾಧೀಶ ಹಿರಿಯ ಗುರುಗಳಾದ ಶ್ರೀ ಶ್ರೀ ಶ್ರೀ ಕೇಶವಾನಂದಭಾರತೀ ಶ್ರೀಪಾದಂಗಳವರು ಹಾಗೂ ಸದಾ ಹರಸುತ್ತಿರುವ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀಶ್ರೀಪಾದಂಗಳವರು ಅವರನ್ನು ಈ ಸಂದರ್ಭದಲ್ಲಿ ಭಕ್ತಿಪೂರ್ವಕ ಸ್ಮರಿಸುತ್ತಾ ಇದ್ದೇನೆ.
ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಗೆ ಪ್ರಣಾಮಗಳು” ಎಂದರು. “ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೂ, ತಾಂತ್ರಿಕ ಸಹೋದ್ಯೋಗಿಗಳಿಗೂ , ಗ್ರಾಹಕರಿಗೂ, ಇಲಾಖೆಯ ಅಧಿಕಾರಿಗಳಿಗಳು ಇವರೆಲ್ಲರ ಪ್ರೋತ್ಸಾಹ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಮುಕ್ತಕಂಠದಿ0ದ ಹೇಳಿದ್ದಾರೆ.
ಸಂಸ್ಥೆ ಇನ್ನಷ್ಟು ಬೆಳಯಲಿ, ಬೆಳಗಲಿ ಎಂಬುದು `ಈದಿನ’ ಸಂಸ್ಥೆಯ ಹಾರೈಕೆ.