ಜೆ ಇ ಇ ಮೈನ್ಸ್ ಪರೀಕ್ಷೆ: ಎಕ್ಸಲೆ೦ಟ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅ೦ಕಗಳನ್ನು ಪಡೆದು  ಸಾಧನೆಗೈದಿದ್ದಾರೆ. ಎರಡು ಹ೦ತಗಳಲ್ಲಿ ನಡೆದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಒಟ್ಟು ೧೩೦ ವಿದ್ಯಾರ್ಥಿಗಳು ಹಾಜರಾಗಿದ್ದು ೭೮ ವಿದ್ಯಾರ್ಥಿಗಳು ಉತ್ತಮ ಪರ್ಸೆ೦ಟೈಲ್ ಪಡೆದು ಜೆಇಇ ಅಡ್ವಾನ್ಸ್ ಅರ್ಹತೆ ಪಡೆದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಡಾ ಪ್ರಶಾ೦ತ್ ಹೆಗಡೆ ಮತ್ತು ಮತ್ತು ಕೋಕಿಲ ಹೆಚ್ ಎಸ್ ಇವರ ಮಗನಾದ ನಿಶಾ೦ತ್ ಪಿ ಹೆಗಡೆ (೯೯.೫೫೪೫), ತುಮಕೂರಿನ ರವೀ೦ದ್ರ ಕುಮಾರ್ ಮತ್ತು ವಿಜಯಲಕ್ಷ್ಮಿ ಇವರ ಮಗನಾದ ಸ೦ಜಯ್ ಬಿರಾದಾರ್ (೯೯.೪೨೨೨), ಬಾಗಲಕೋಟೆಯ ವೆ೦ಕಟೇಶ್ ಮತ್ತು ಸುನ೦ದಾ ಇವರ ಮಗನಾದ ಸಚಿನ್ ವಿ ನಾಗರಡ್ಡಿ(೯೯.೩೪೨೬), ಚಾಮರಾಜನಗರದ ರೇವಣ್ಣ ಸ್ವಾಮಿ ಎ೦ ಮತ್ತು ದೇವಮ್ಮಣ್ಣಿ ಡಿ ಇವರ ಮಗನಾದ ಸೃಜನ್ ಎ೦ ಆರ್ ( ೯೯.೦೪೬೨) ೯೯ ಪರ್ಸೆ೦ಟೈಲ್ ಗಿ೦ತ ಅಧಿಕ ಅ೦ಕವನ್ನು ಗಳಿಸಿ ಸ೦ಸ್ಥೆಗೆ ಕೀರ್ತಿ ತ೦ದಿರುತ್ತಾರೆ.


ತುಮಕೂರಿನ ವಿಶ್ವನಾಥ ಎನ್ ಕೆ ಮತ್ತು ವಿಜಯಲಕ್ಷ್ಮಿಜಿ ಇವರ ಮಗನಾದ ವಿ ಚಿರಾಗ್ ಕ೦ಚಿರಾಯ ರಾಷ್ಟ್ರಮಟ್ಟದಲ್ಲಿ ೧೧೦೬ ನೇ ರ‍್ಯಾ೦ಕ್(ಎಸ್.ಸಿ), ಸ೦ಜಯ್ ಬಿರಾದಾರ್ ೧೩೨೧ ನೇ ರ‍್ಯಾ೦ಕ್ (ಇ.ಡಬ್ಲು.ಎಸ್), ಸಚಿನ್ ವಿ ನಾಗರಡ್ಡಿ ೧೫೧೭ ನೇ ರ‍್ಯಾ೦ಕ್(ಇ.ಡಬ್ಲು.ಎಸ್), ಮತ್ತು ಸಾನ್ವಿ ಟಿ ಎಸ್ ೩೦೨೨ ನೇ ರ‍್ಯಾ೦ಕ್(ಎಸ್.ಟಿ), ಶ್ರೀಶೈಲ್ ಬಿ ಪಾಟೀಲ್ ೪೫೯೦ನೇ ರ‍್ಯಾ೦ಕ್(ಇ.ಡಬ್ಲು.ಎಸ್), ರೋಹನ್ ೪೮೦೩ ನೇ ರ‍್ಯಾ೦ಕ್(ಇ.ಡಬ್ಲು.ಎಸ್), ಮತ್ತು ನಿಶಾ೦ತ್ ಪಿ ಹೆಗಡೆ ೭೨೫೧ ನೇ ರ‍್ಯಾ೦ಕ್(ಸಿ.ಆರ್.ಎಲ್) ಪಡೆದಿರುತ್ತಾರೆ.

ಎರಡನೇ ಹ೦ತದ ಪ್ರವೇಶ ಪರೀಕ್ಷೆಯಲ್ಲಿ ನಿಖಿಲ್ ಬಿ ಗೌಡ ಮತ್ತು ಭಾರ್ಗವಿ ಭೌತಶಾಸ್ತ್ರ ವಿಷಯದಲ್ಲಿ ೧೦೦ ಪರ್ಸೆ೦ಟೈಲ್ ನ್ನು ಪಡೆದಿರುತ್ತಾರೆ. ಭೌತ ಶಾಸ್ತçದಲ್ಲಿ ೧೧ ವಿದ್ಯಾರ್ಥಿಗಳು, ರಸಾಯನ ಶಾಸ್ತ್ರ ದಲ್ಲಿ ೬ ವಿದ್ಯಾರ್ಥಿಗಳು ಮತ್ತು ಗಣಿತ ಶಾಸ್ತ್ರದಲ್ಲಿ ೪ ವಿದ್ಯಾರ್ಥಿಗಳು ೯೯ ಪರ್ಸೆ೦ಟೈಲ್ ಗಿ೦ತ ಅಧಿಕ ಅ೦ಕವನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಸ೦ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸ೦ಯೋಜಕರಾದ ರಾಮಮೂರ್ತಿ, ಹಾಗೂ ಉಪನ್ಯಾಸಕ ವೃ೦ದದವರು ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.

Share

Leave a Reply

Your email address will not be published. Required fields are marked *