ಮಂಗಳೂರು: ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ರಿ. ಆಶ್ರಯದಲ್ಲಿ ಗಟ್ಟಿ ಸಮಾಜದ ವಾರ್ಷಿಕ ಕ್ರೀಡಾಕೂಟ ಡಿಸಂಬರ್ ೧೭ ಭಾನುವಾರ ಉಳ್ಳಾಲ ಭಾರತ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಡಿಸಂಬರ್ ೩೧ ಆದಿತ್ಯವಾರದಂದು ಗಟ್ಟಿ ಸಮಾಜ ಭವನದಲ್ಲಿ ಆಯೋಜಿಸಲಾಗಿದೆ. ಅದೇ ದಿನ ಬೆಳಗ್ಗೆ ೭ ಗಂಟೆಗೆ ವೇದಮೂರ್ತಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಡಿಸಂಬರ್ ೧೭ರಂದು ನಡೆಯುವ ಕ್ರೀಡಾಕೂಟದ ಉದ್ಘಾಟನೆಯನ್ನು ಉಳ್ಳಾಲ ಪೊಲೀಸ್ ಠಾಣೆಯ ಇನ್ಸೆ÷್ಪಕ್ಟರ್ ಬಾಲಕೃಷ್ಣ ಎಚ್ ಎನ್ ನೆರವೇರಿಸುವರು. ಅಧ್ಯಕ್ಷತೆಯನ್ನು ಮಾತೃಸಂಘದ ಅಧ್ಯಕ್ಷ ಜನಾರ್ಧನ ಗಟ್ಟಿ ಕನ್ನಿಮನೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಮೇಶ್ ಗಟ್ಟಿ, ಪ್ರಜ್ವಿತ ಗಟ್ಟಿ ಉಚ್ಚಿಲ, ನಿಖಿಲ್ ಗಟ್ಟಿ ಕೈರಂಗಳ, ಶಿಶಿರ್ ಗಟ್ಟಿ ಅಶೋಕ್ ನಗರ ದಂಬೆಲ್ ಭಾಗವಹಿಸುವರು.
೬ರಿಂದ ೧೦ವರ್ಷದ ಒಳಗಿನ ಮಕ್ಕಳಿಗೆ ೫೦ಮೀಟರ್ ಓಟ, ಕಪ್ಪೆ ಜಿಗತ, ಸೂಜಿದಾರ, ಲಿಂಬೆ ಹಣ್ಣಿನ ಓಟ ನಡೆಯಲಿದೆ. ವಯೋಮಿತಿಗೆ ಅನುಗುಣವಾಗಿ ಇನ್ನಿತರ ಆಟೋಟ ಸ್ಪರ್ಧೆ ನಡೆಯಲಿವೆ. ಮಹಿಳೆಯರಿಗಾಗಿ ೧೦೦ಮೀಟರ್ ಓಟ, ೨೦೦ಮೀಟರ್ ಓಟ, ೪೦೦ ಮೀಟರ್ ರಿಲೇ, ತ್ರೋ ಬಾಲ್, ಶಾಟ್ ಪುಟ್, ಮ್ಯೂಸಿಕಲ್ ಚೇಯರ್, ಮೇಣದ ಬತ್ತಿ ಉರಿಸುವುದು , ಪುರುಷರಿಗೆ ವಾಲಿಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ಕಬಡ್ಡಿ ಪಂದ್ಯಾಟ ನಡೆಯಲಿದೆ.