ರಂಗ ನಿರ್ದೇಶಕಿ ಗೀತಾ ಸುಳ್ಯ ಅವರಿಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ

ಮೂಡುಬಿದಿರೆ: ರಂಗ ನಿರ್ದೇಶಕಿ ಗೀತಾ ಸುಳ್ಯ ರಾಜ್ಯ ಮಟ್ಟದ ಕರ್ನಾಟಕ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಲಿಜ ಭವನ ಬಳ್ಳಾರಿಯಲ್ಲಿ ನವೆಂಬರ್ ೨೬, ಭಾನುವಾರದಂದು, ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ, ಮತ್ತು ೬೮ನೆಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯುವ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಶ್ರೀ ಮಹಾದೇವ ಎಜುಕೇಷನ್, ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ (ರಿ.) ಬಳ್ಳಾರಿ ಹಾಗೂ ಅಖಿಲ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಿತಿ ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.


ಸಾಗರದ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೋಮ ಇನ್ ಥಿಯೇಟರ್ ಆರ್ಟ್ ಅಭ್ಯಸಿಸಿದ ಗೀತಾ ಕುಮಾರಿ ಎಂ, ಪ್ರಸ್ತುತ ಕಲ್ಲಬೆಟ್ಟು ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ರಂಗ ಶಿಕ್ಷಣ ಶಿಕ್ಷಕಿ ಹಾಗೂ ರಂಗ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಗಾಗಲೇ ಎಸ್‌ಡಿಎಂ ಉಜಿರೆ, ಭಂಡಾರ್ಕಾರ್ಸ್ ಕುಂದಾಪುರ, ಆಳ್ವಾಸ್ ಮೂಡುಬಿದಿರೆ, ಜೆಎಸ್‌ಎಸ್ ಮೈಸೂರು, ರಂಗಾಯಣ ಮೈಸೂರು, ವೀರಭೂಮಿ ಕುಶಾಲನಗರ, ನೀನಾಸಮ್, ಉದಯ ಕಲಾವಿದರು ಸಾಗರ, ಜಗದ್ಗುರು ಶ್ರೀ ಮುರುಘ ರಾಜೇಂದ್ರ ಮಠ ಚಿತ್ರದುರ್ಗ ಹೀಗೆ ವಿವಿದ ಕಡೆಗಳಲ್ಲಿ ರಂಗ ಶಿಕ್ಷಕಿಯಾಗಿ, ನಿರ್ದೇಶಕಿಯಾಗಿ, ಗಾಯಕಿಯಾಗಿ, ಜನಪದ ನೃತ್ಯಗಾರ್ತಿಯಾಗಿ,ಮುಖ್ಯ ನಟಿಯಾಗಿ, ಅಪಾರ ಅನುಭವ ಪಡೆದುಕೊಂಡಿದ್ದಾರೆ.


ಗೀತಾ ಸುಳ್ಯ ನಿರ್ದೇಶಿಸಿದ ನಾಟಕಕ್ಕೆ ರಾಷ್ಟçಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳು ಬಂದಿದ್ದು, ಇವರ ಸಮರ್ಥ ನಿರ್ದೇಶನಕ್ಕೆ ಸಾಕ್ಷಿಯಾಗಿದೆ. ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿದ ಇವರು, ನೂರಕ್ಕೂ ಅಧಿಕ ಕಿರು ನಾಟಕಗಳನ್ನು ಮತ್ತು ಬೀದಿನಾಟಕಗಳನ್ನು , ವಿಜ್ಞಾನ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.
ಎಳವೆಯಲ್ಲಿಯೇ ಅಭಿನಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು, ಯಕ್ಷಗಾನ, ಜಾನಪದ ನೃತ್ಯ, ಹಿನ್ನಲೆ ಗಾಯನ, ನಾಟಕ, ಭಜನೆ, ಮೂಕಾಭಿನಯ, ಏಕಪಾತ್ರಾಭಿನಯ, ಜಾನಪದ ಗೀತೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಮರ್ಥ ಸಾಧನೆ ಮಾಡಿ ರಾಷ್ಟç ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಝೀ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಮನ್ನಣೆಗೆ ಪಾತ್ರರಾಗಿದ್ದಾರೆ.

Share

Leave a Reply

Your email address will not be published. Required fields are marked *