ಕೋಳಿಗೆ ಎಷ್ಟು ಕಾಲು ನೀವೇ ಹೇಳಿ?!

ಇದು ವಿಚಿತ್ರವಾದ್ರೂ ಸತ್ಯಾರೀ…!
ಸುಳ್ಯ: ಕೋಳಿಗೆ ಎಷ್ಟು ಕಾಲು…ನೀವೇ ಹೇಳಿ… ಒಂದು… ಎರಡು…ಮೂರು…ಊಹೂಂ…ಅಲ್ಲವೇ ಅಲ್ಲ…ಬರೋಬ್ಬರಿ ನಾಲ್ಕು! ಅಬ್ಬಾ…ಹೀಗೂ ಉಂಟೇ? ಈ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದಲ್ವೇ…ಖಂಡಿತಾ. ಈ ಕೋಳಿಗೆ ಎರಡಲ್ಲ…ಬರೋಬ್ಬರಿ ನಾಲ್ಕು ಕಾಲುಗಳಿವೆ ಎಂದರೆ ಅಚ್ಚರಿಯಾಗದಿರದು.

ಇದೀಗ ನಾಲ್ಕು ಕಾಲಿನ ವಿಶೇಷ ಕೋಳಿಯನ್ನು ವೀಕ್ಷಿಸಲು ಜನ ಬರ್ತಿದ್ದಾರೆ. ಸುಳ್ಯದ ಗಾಂಧಿನಗರದ ಹೈವೇ ಚಿಕಿನ್ ಸ್ಟಾಲಿಗೆ ಮಾರಾಟಕ್ಕೆ ಮೈಸೂರಿನಿಂದ ಬಂದ ಕೋಳಿಗಳಲ್ಲಿ ಈ ನಾಲ್ಕು ಕಾಲಿನ ಕೋಳಿಯೂ ಇತ್ತು. ಕೋಳಿನೋಡುವ ನೆಪದಲ್ಲಿ ಚಿಕನ್ ಸ್ಟಾಲಿಗೆ ಜನವೋ ಜನ… ಚಿಕನ್ ಖರೀದಿಯೂ ಚೆನ್ನಾಗಿ ನಡೆಯುತ್ತಿದೆ. ನಾಲ್ಕು ಕಾಲಿನ ಕೋಳಿ ಅದೃಷ್ಟತಂದಿದೆ ಎಂದರೆ ತಪ್ಪಾಗಲಾರದು!

Share

Leave a Reply

Your email address will not be published. Required fields are marked *