ಯುವರಾಜಾಭಿನಂದನ: ಅಭಿಮಾನಿಗಳು, ಸಿಬ್ಬಂದಿಗಳಿ0ದ ಪ್ರೀತಿಯ ಅಭಿನಂದನೆ

ಮೂಡುಬಿದಿರೆ: ಅವಿಸ್ಮರಣೀಯ, ಅಪರೂಪದ ಕಾರ್ಯಕ್ರಮಕ್ಕೆ ಎಕ್ಸಲೆಂಟ್ ರಾಜ ಸಭಾಂಗಣ ಸಾಕ್ಷಿಯಾಯಿತು. ನವದೆಹಲಿಯ ಗ್ಲೋಬಲ್ ಅಂಬಾಸಡೆರ್ ಆಫ್ ಎಜುಕೇಷನ್ ಎಕ್ಸಲೆನ್ಸ್ ಅವಾರ್ಡ್ ಹಾಗೂ ಮೂಡುಬಿದಿರೆ ಸಮಾಜ ಮಂದಿರ ಪುರಸ್ಕಾರ ೨೦೨೩ಕ್ಕೆ ಭಾಜನರಾದ ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರನ್ನು ಸಂಸ್ಥೆಯ ಹ ಸಂಸ್ಥೆಗಳ ಬೋಧಕ, ಬೋಧಕೇತರ, ಸಿಬ್ಬಂದಿಗಳು ರೋಟರಿ ಟೆಂಪಲ್ ಟೌನ್, ಮೂಡುಬಿದಿರೆ ಜೈನ್ ಮಿಲನ್, ಜೆಸಿಐ ಮೂಡುಬಿದಿರೆ ಸಂಘಟನೆಯ ಪ್ರಮುಖರು ಹಾಗೂ ಮೂಡುಬಿದಿರೆಯ ನಾಗರೀಕರು ಪ್ರೀತಿಯಿಂದ ಗೌರವಿಸಿ ಸನ್ಮಾನಿಸಿದರು.

ಯುವರಾಜ್ ಜೈನ್ ಅವರನ್ನುಗೌರವಿಸಿ ಸನ್ಮಾನಿಸಿದರು.

“ಕಿರು ಅವಧಿಯಲ್ಲಿ ಶ್ರೇಷ್ಟ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು `ಮಾದರಿ’ಯಾಗಿ ಕಟ್ಟಿಬೆಳೆಸಿದ ಸಾಧನೆ ಯುವರಾಜ ಜೈನ್ ಅವರದ್ದು. ಹಲವು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ, ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದಾರೆ. ಇವರ ಸಾಧನೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ. ಶಿಕ್ಷಣ, ಸಂಸ್ಕೃತಿಗಳಿಗೆ ಯುವರಾಜ್ ಜೈನ್ ನೀಡಿದ ಕೊಡುಗೆ ಅಪಾರ. ಅನೇಕ ಮಂದಿಯ ಬಾಳಿಗೆ ಬೆಳಕಾದ ಯುವರಾಜ್ ಜೈನ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಪೂರ್ವಕವಾಗಿ ಗೌರವಿಸಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಹೇಳಿದರು.


ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ, ಶಾಸಕ ಉಮಾನಾಥ ಕೋಟ್ಯಾನ್, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ರೋಟರಿಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ರೊನಾಲ್ಡ್ ಫೆರ್ನಾಂಡೀಸ್, ಜೆಸಿ ಅಧ್ಯಕ್ಷ ಸುನಿಲ್ ಕುಮಾರ್, ಜೈನ್ ಮಿಲನ್ ಅಧ್ಯಕ್ಷ ದಿನೇಶ್ ಆನಡ್ಕ ಉಪಸ್ಥಿತರಿದ್ದರು.
ಅರ್ಹವಿದ್ಯಾರ್ಥಿಗಳಿಗೆ, ಹಳೆವಿದ್ಯಾರ್ಥಿಗಳಿಗೆ, ಸಮಾಜದ ಅಶಕ್ತ ವರ್ಗಗಳಿಗೆ ಎಕ್ಸಲೆಂಟ್ ಸಮೂಹ ಸಂಸ್ಥೆಯು ಈಗಾಗಲೇ ಅನೇಕ ಸಹಕಾರ ಸೇವೆಗಳನ್ನು ನೀಡುತ್ತಾ ಬಂದಿದ್ದು ಇನ್ನು ಮುಂದೆ `ಎಕ್ಸಲೆಂಟ್ ಸಹಾಯ ನಿಧಿ’ಯ ರೂಪದಲ್ಲಿ ಲಭ್ಯವಾಗುವ ಸೇವೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಡಾ.ಬಿ ಸಂಪತ್ ಕುಮಾರ್ ಸ್ವಾಗತಿಸಿದರು. ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಂದ್ರ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಮೌಲ್ಯ ಅವರಿಂದ ಕಾವ್ಯಾಭಿನಂದನೆ ನಡೆಯಿತು. ಡಾ.ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.

Share

Leave a Reply

Your email address will not be published. Required fields are marked *