ಮೂಡುಬಿದಿರೆ: ನವದೆಹಲಿಯ ಗ್ಲೋಬಲ್ ಅಂಬಾಸಡೆರ್ ಆಫ್ ಎಜುಕೇಷನ್ ಎಕ್ಸಲೆನ್ಸ್ ಅವಾರ್ಡ್ ಹಾಗೂ ಮೂಡುಬಿದಿರೆ ಸಮಾಜ ಮಂದಿರ ಪುರಸ್ಕಾರ ೨೦೨೩ಕ್ಕೆ ಭಾಜನರಾದ ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರ ಅಭಿನಂದನಾ ಸಮಾರಂಭ ೨೨ರಂದು ಸಂಜೆ ೬ಗಂಟೆಗೆ ಎಕ್ಸಲೆಂಟ್ `ರಾಜ ಸಭಾಂಗಣ’ದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಸಂಪತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಟರಿ ಟೆಂಪಲ್ ಟೌನ್, ಮೂಡುಬಿದಿರೆ ಜೈನ್ ಮಿಲನ್, ಜೆಸಿಐ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಬೋಧಕ, ಬೋಧಕೇತರ, ಸಿಬ್ಬಂದಿಗಳು ಈ ಕಾರ್ಯಕ್ರಮ ಆಯೋಜಿಸಿದೆ.
ಕಿರು ಅವಧಿಯಲ್ಲಿ ಶ್ರೇಷ್ಟ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು `ಮಾದರಿ’ಯಾಗಿ ಕಟ್ಟಿಬೆಳೆಸಿದ ಸಾಧನೆ ಯುವರಾಜ ಜೈನ್ ಅವರದ್ದು. ಹಲವು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ, ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದಾರೆ. ಇವರ ಸಾಧನೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ. ಶಿಕ್ಷಣ, ಸಂಸ್ಕೃತಿಗಳಿಗೆ ಯುವರಾಜ್ ಜೈನ್ ನೀಡಿದ ಕೊಡುಗೆ ಅಪಾರ. ಅನೇಕ ಮಂದಿಯ ಬಾಳಿಗೆ ಬೆಳಕಾದ ಯುವರಾಜ್ ಜೈನ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಪೂರ್ವಕವಾಗಿ ಗೌರವಿಸುವ ಕಾರ್ಯಕ್ರಮ ಇದಾಗಿದೆ.

ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕ ಉಮಾನಾಥ ಕೋಟ್ಯಾನ್, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಜೇಸಿ ತರಬೇತುದಾರ ರಾಜೇಂದ್ರ ಭಟ್ ಕೆ ಅಭಿನಂದನಾ ನುಡಿಗಳನ್ನಾಡುವರು. ಆಕರ್ಷಕ ಮೆರವಣಿಗೆ, ಸ್ವಾಗತ ನೃತ್ಯ, ಹಾಡು, ಸನ್ಮಾನಗಳು ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಅರ್ಹವಿದ್ಯಾರ್ಥಿಗಳಿಗೆ, ಹಳೆವಿದ್ಯಾರ್ಥಿಗಳಿಗೆ, ಸಮಾಜದ ಅಶಕ್ತ ವರ್ಗಗಳಿಗೆ ಎಕ್ಸಲೆಂಟ್ ಸಮೂಹ ಸಂಸ್ಥೆಯು ಈಗಾಗಲೇ ಅನೇಕ ಸಹಕಾರ ಸೇವೆಗಳನ್ನು ನೀಡುತ್ತಾ ಬಂದಿದೆ. ಇನ್ನು ಮುಂದೆ `ಎಕ್ಸಲೆಂಟ್ ಸಹಾಯ ನಿಧಿ’ಯ ರೂಪದಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವಿವರಿಸಿದರು.
ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಚೈತ್ರಾ , ಉಪನ್ಯಾಸಕ ವಾದಿರಾಜ ಕಲ್ಲೂರಾಯ ಉಪಸ್ಥಿತರಿದ್ದರು.