ಇವರ ಕೈಯಲ್ಲರಳುತ್ತಿವೆ ಅದ್ಭುತ ಕಲಾಕೃತಿಗಳು. ಹೌದು ಎಂಥಹವರನ್ನೂ ಒಮ್ಮೆ ನಿಬ್ಬೆರಗಾಗಿಸುವುದಂತೂ ಸತ್ಯ. ನೋಡಲು ಇದು ನೈಜವೆಂಬAತೆ ಕಾಣುತ್ತಿದೆಯಾದರೂ ಇದು ರಂಗೋಲಿ ಎಂದರೆ ಅಚ್ಚರಿಯಾಗದಿರದು.
ಇವರು ವಿದ್ಯಾ ಮಂಗೇಶ್ ಪೈ. ದಸರಾದ ಒಂಭತ್ತೂ ದಿನಗಳಲ್ಲಿ ಆಯಾ ದಿನದ ಬಣ್ಣದ ಸೀರೆಯುಟ್ಟು, ತಮ್ಮ ಸೀರೆಯ ಮಾದರಿಯಲ್ಲಿಯೇ ರಂಗೋಲಿ ಹಾಕುತ್ತಾರೆ. ರಂಗೋಲಿ ಅಂತ ಹೇಳಲು ಸಾಧ್ಯವೇ ಆಗಲ್ಲ. ಅಷ್ಟು ಸಹಜ. ನೋಡುಗರನ್ನು ಮೋಡಿ ಮಾಡುವ ಈ ರಂಗೋಲಿ ನೋಡಿ ಮೂಕ ವಿಸ್ಮಿತರಾಗುವದಂತೂ ಸತ್ಯ. ಇವರಿಂದ ಇನ್ನಷ್ಟು ರಂಗೋಲಿಗಳು ಮೂಡಿ ಬರಲಿ. ಶುಭವಾಗಲಿ.