ಪವರ್ ಲೈನ್ ಕೆಳಭಾಗದಲ್ಲಿ ಕೃಷಿ, ಮನೆ!
ಶಿವಮೊಗ್ಗ: ಜೋಗದಿಂದ ಬೆಂಗಳೂರಿಗೆ ಪವರ್ ಲೈನ್ ಸಂಪರ್ಕವಾಗಿ ಹಲವು ವರುಷಗಳಾಗಿವೆ. ಅನೇಕ ಕೃಷಿಭೂಮಿಯ ಮೇಲೆ ಈ ಹೆವಿ ಲೈನುಗಳು ಮೂರು ಪ್ರತ್ಯೇಕ ಟವರುಗಳ ಮೂಲಕ ಸಾಗಿವೆ. ಹಲವು ಟವರುಗಳು ಕೃಷಿಭೂಮಿ, ಸಹಿತ ಅನೇಕ ಜಾಗಗಳಲ್ಲಿ ನೆಡಲಾಗಿದೆ. ವಿದ್ಯುತ್ ಲೈನುಗಳು ಕೃಷಿ ಭೂಮಿ, ಕಾಡು ಪ್ರದೇಶ ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ಹಾದು ಹೋಗಿದೆ. ಈ ವಿದ್ಯುತ್ ಲೈನ್ ಹಾದುಹೋಗಿರುವುದರಿಂದ ಸಮಸ್ಯೆಗಳೇನಾದರೂ ಸಂಭಿಸಿವಿಯೇ ಎಂಬ ಪ್ರಶ್ನೆ ನೈಜವಾಗಿ ಮೂಡುತ್ತಿದ್ದು, ಕೃಷಿಕ ಹನುಮಂತಪ್ಪ ಸಮರ್ಪಕ ಉತ್ತರ ನೀಡಿದ್ದಾರೆ.
ನಮ್ಮ ಭತ್ತದ ಕೃಷಿ ಭೂಮಿಯಲ್ಲಿ ವಿದ್ಯುತ್ ಲೈನ್ ಹಾದುಹೋಗಿವೆ. ನಾವು ಭತ್ತ, ಜೋಳ, ಕಬ್ಬು, ಸೇರಿದಂತೆ ಇತರೆ ಕೃಷಿಗಳನ್ನು ಅಲ್ಲಿಯೇ ಮಾಡುತ್ತೇವೆ. ನಮಗೆ ಯಾವೊಂದು ತೊಂದರೆಯೂ ಉಂಟಾಗುತ್ತಿಲ್ಲ ಎಂದಿದ್ದಾರೆ. ವಿದ್ಯುತ್ ತಂತಿ ಹಾದು ಹೋಗುವ ಸಂದರ್ಭದಲ್ಲಿ ಆಯಾ ಕೃಷಿಕರಿಗೆ ಪರಿಹಾರ ನೀಡಿದ್ದು ಒಂದೆಡೆಯಾದರೆ, ಇತ್ತ ಕೃಷಿ ಭೂಮಿಯಲ್ಲಿ ಕೃಷಿಯೂ ಯಾವೊಂದು ತೊಂದರೆಯಿಲ್ಲದೆ ನಡೆಯುತ್ತಿದೆ.

ಇದರಿಂದಾಗಿ ನಿರಂತರ ಕೃಷಿ ಚಟುವಟಿಕೆಯೂ ನಡೆದಂತಾಗುತ್ತದೆ.
ಅನೇಕ ಪ್ರದೇಶಗಳಲ್ಲಿ ಜನವಸತಿ, ಧಾರ್ಮಿಕ ಕೇಂದ್ರಗಳ ನಡುವೆಯೂ ಈ ವಿದ್ಯುತ್ ತಂತಿ ಹಾದು ಹೋಗಿವೆ. ಇದರಿಂದ ಯಾವೊಂದು ತೊಂದರೆಯೂ ಇಲ್ಲ ಎನ್ನುತ್ತಾರೆ ಈ ಭಾಗದ ಸ್ಥಳೀಯರು.
