ಪುಸ್ತಕ ಮನೆಯೆಂಬ ಚೆಂದದ ಗೂಡು!

ಕಾರ್ಕಳ: ಹೌದು ಇದೊಂದು ಚೆಂದದ ಗೂಡು. ಹೆಸರಾಂತ ಸಾಹಿತಿಗಳ ಸಾಹಿತ್ಯ ಕೃತಿಗಳಿವೆ. ಆಂಗ್ಲ ಕನ್ನಡ ಭಾಷೆಯ ಅನರ್ಘ್ಯ ಪುಸ್ತಕಗಳಿವೆ. ಪುಸ್ತಕಗಳನ್ನು ಓದುವ ಪ್ರತ್ಯೇಕ ವಿಭಾಗವೂ ಇದೆ. ಮಕ್ಕಳ ಆಸಕ್ತಿಗನುಗುಣವಾದ ಕಿಡ್ಸ್ ಝೋಜ್ ಇದೆ. ಶಾಲಾ ಕಾಲೇಜುಗಳಿಗೆ ಬೇಕಾಗಿರುವಂತಹ ಪರಿಕರಗಳು ಲಭ್ಯವಿದೆ. ಓದಿ ಎಸೆಯುವ ಪುಸ್ತಕಗಳಿಗೆ ಇಲ್ಲಿ `ಉತ್ತಮ ಮೌಲ್ಯ’ವಿದೆ. ಕಾಫಿ ಹಬ್ ಇದೆ. ಕಾರ್ಕಳದ ಜೋಡು ರಸ್ತೆಯಲ್ಲಿ ಒಂದು ಉತ್ತಮವಾದ ಸುಂದರವಾದ ಪುಸ್ತಕ ಮನೆ ಅನಾವರಣಗೊಂಡಿದೆ.
ಕಾರ್ಕಳ ಜೋಡು ರಸ್ತೆಯಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿಯೇ `ಕ್ರಿಯೇಟಿವ್’ ಪದವಿಪೂರ್ವ ಕಾಲೇಜು ಆರಂಭಿಸಿ, ಯಶಸ್ಸನ್ನು ಪಡೆದ ಏಳು ಮಂದಿ ಯುವಕರ ತಂಡದ ಮತ್ತೊಂದ ಸಾಹಸವೇ ಈ ಕ್ರಿಯೇಟಿವ್ ಪುಸ್ತಕ ಮನೆ. ಹೆಸರಿನುಗುಣವಾಗಿ `ಕ್ರಿಯೇಟಿವ್’ ಆಗಿ ರೂಪುಗೊಂಡಿದೆ.

ಶಾಸಕ ಸುನಿಲ್ ಕುಮಾರ್ ಪುಸ್ತಕ ಮನೆಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಸಿವು ನೀಗಿಸಲು ಈ ಪುಸ್ತಕ ಮನೆ ಪೂರಕವಾಗಿದೆ. ಶಿಕ್ಷಣ ಸಂಸ್ಥೆಯೊ0ದು ಶಿಕ್ಷಣದೊಂದಿಗೆ ಪೂರಕವಾಗಿರುವ ವಿಚಾರಗಳನ್ನು ನೀಡುವ ಸಾಹಸ ಮಾಡಿರುವುದು ಶ್ಲಾಘನಾರ್ಹ ಎಂದಿದ್ದಾರೆ. ಮೌಲ್ಯಯುತ ಪುಸ್ತಕಗಳನ್ನು ಮಳಿಗೆಗೆ ಹಸ್ತಾಂತರಿಸಿ ಕಾರ್ಯಕ್ರಮದ ಮೆರುಗನ್ನು ಸುನಿಲ್ ಕುಮಾರ್ ಹೆಚ್ಚಿಸಿದ್ದರು. ಕ್ರಿಯೆಟಿವ್ ಸಪ್ತ ನಿರ್ದೇಶಕರ ತಂಡದೊ0ದಿಗೆ, ಪುಸ್ತಕ ಪ್ರೇಮಿಗಳು, ಆತ್ಮೀಯ ವರ್ಗದವರು ಪಾಲ್ಗೊಂಡಿದ್ದರು. ಉದ್ಘಾಟನಾ ಸಮಾರಂಭದ ಪ್ರಯುಕ್ತ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪುಟಗಳೊಂದಿಗೆ ಪುಸ್ತಕಮನೆಯ ಪಯಣ ಆರಂಭವಾಗಿದೆ. ಇದು ಹೆಮ್ಮರವಾಗಿ ವಿಶಾಲವಾಗಿ ಬೆಳೆಯುವ ಸೂಚನೆ ಲಭಿಸಿದೆ.

Share

Leave a Reply

Your email address will not be published. Required fields are marked *