ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ ಏಳೂವರೆ ದಶಕಗಳ ಪರಂಪರೆ ಮತ್ತು ವೈಭವದ ಇತಿಹಾಸವಿರುವ 76ನೇ ಮೂಡುಬಿದಿರೆಯ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಅ15ರಿಂದ 19ರವರೆಗೆ ಐದು ದಿನಗಳ ಕಾಲ ಸಮಾಜ ಮಂದಿರದಲ್ಲಿ ನಡೆಯಲಿದೆ.
ಪ್ರತೀ ದಿನ ಸಂಜೆ 7ರಿಂದ ಸಾಹಿತ್ಯ ಕಲಾಪ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು ಈ ಬಾರಿ ಮೂಡುಬಿದಿರೆ ದಸರಾವನ್ನುಅ15ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಉದ್ಘಾಟಿಸಲಿದ್ದಾರೆ.

ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ ಸಮಾಜ ಮಂದಿರ ಪುರಸ್ಕಾರ ಪ್ರದಾನ ನಡೆಯಲಿದೆ. ಬಳಿಕ ನಾಟ್ಯ ವಿಧುಷಿ ಶ್ರೀಮತಿ ಸುಖದಾ ಬರ್ವೆ ಅವರ ಶಿಷ್ಯರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ. ಅ16ರಂದು ಸಂಜೆ ‘ನುಡಿ ಚಿಂತನ’ದಲ್ಲಿ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅವರು ‘ನಾಡು ನುಡಿ ಸಂವೇದನೆ’ ಕುರಿತು ಉಪನ್ಯಾಸ ನೀಡಲಿದ್ದಾರೆ.ಮೂಡುಬಿದಿರೆ ಎಂ.ಸಿ.ಎಸ್, ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆವಹಿಸಲಿದ್ದಾರೆ. ಬಳಿಕ ಮಂಗಳೂರಿನ ಸನಾತನ ನಾಟ್ಯಾಲಯದ ನಾಟ್ಯ ಕಲಾ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಇವರ ಮೂಡುಬಿದಿರೆ ಮತ್ತು ಮುಂಗಳೂರಿನ ಶಿಷ್ಯರಿಂದ ‘ಸನಾತನ ನಾಟ್ಯಾಂಜಲಿ’ ಕಾರ್ಯಕ್ರಮ ಜರಗಲಿದೆ. ಅ17ರಂದು ಸಂಜೆ 7-00 ರಿಂದ ವರ್ಧಮಾನ ಪ್ರಶಸ್ತಿ ಪೀಠ’ (ದಿ.) ಮೂಡುಬಿದಿರೆ ಇದರ 2022 ಸಾಲಿನ ‘ವರ್ಧಮಾನ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ. ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಶ್ರೀಗಳವರ ಉಪಸ್ಥಿತಿಯಲ್ಲಿಪೀಠದ ಅಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ ಅವರು ಡಾ. ಅಜಕ್ಕಳ ಗಿರೀಶ ಭಟ್(ವರ್ಧಮಾನ ಸಾಹಿತ್ಯ ಪ್ರಶಸ್ತಿ), ಎಂ. ಆರ್. ದತ್ತಾತ್ರಿ (ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ )ಪ್ರದಾನ ಮಾಡಲಿದ್ದಾರೆ. ಬಳಿಕ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ “ಗೀತ – ಸಾಹಿತ್ಯ ಸಲ್ಲಾಪ” ಕಾರ್ಯಕ್ರಮವಿದೆ.
ಅ18ರ ಬುಧವಾರ ‘ವಿಚಾರ ಮಂಥನ’ದಲ್ಲಿ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ‘ಯಕ್ಷಗಾನ – ಸ್ವರೂಪ ಮತ್ತು ನಾವೀನ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ. ವೈದ್ಯರಾದ ಡಾ. ಹರೀಶ್ ನಾಯಕ್, ಅಧ್ಯಕ್ಷತೆವಹಿಸಲಿದ್ದಾರೆ. ಟಾಪ್ ಎಂಟಟೈನರ್ಸ್ ಡ್ಯಾನ್ಸ್ಅ ಕಾಡೆಮಿ,ಮೂಡುಬಿದಿರೆ ಇದರಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಅ19ರಂದು ಗುರುವಾರ ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ ಅವರು ‘ವ್ಯಾಸ ಭಾರತ – ಪಂಪ ಭಾರತ : ತೌಲನಿಕ ನೋಟ’ ಕುರಿತು ಉಪನ್ಯಾಸ ನೀಡಲಿದ್ಧಾರೆ. ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆವಹಿಸಲಿದ್ದಾರೆ. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಯಕ್ಷ – ಗಾನ ಲಹರಿ’
ಕಾರ್ಯಕ್ರಮ ಜರಗಲಿದೆ ಎಂದು ಸಮಾಜ ಮಂದಿರ ಸಭಾದ ಪ್ರಕಟಣೆ ತಿಳಿಸಿದೆ.