ಹೃದಯಾರೋಗ್ಯ : ಭಯ ಬೇಡ, ಮುನ್ನೆಚ್ಚರಿಕೆ ಇರಲಿ

ಮೂಡುಬಿದಿರೆ: ಸಾಮಾನ್ಯವಾಗಿ ಮನುಷ್ಯನಿಗೆ ಬರುವ ಹೃದಯ ಸಂಬ0ಧಿ ಕಾಯಿಲೆಗಳಲ್ಲಿ ಮೂರು ವಿಧಗಳು. ಹೃದಯಾಘಾತ, ಹೃದಯ ವೈಫಲ್ಯ ಹಾಗೂ ಹೃದಯ ಸ್ಥಂಭನ. ಇವುಗಳಿಗೆ ನಾನಾ ಕಾರಣಗಳಿವೆ  ಎಂದು ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಖ್ಯಾತ ಹೃದಯ ತಜ್ಞರಾದ ಡಾ. ದಿತೇಶ್ ಎಂ. ತಿಳಿಸಿದರು.

ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ  ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ನಾವು ದಿನ ನಿತ್ಯ ಸೇವಿಸುವ ಆಹಾರ ಪದ್ಧತಿಯೇ ಅತೀ ಮುಖ್ಯವಾಗಿದೆ. ಅದಕ್ಕಾಗಿ ಪ್ರತಿ ದಿನ ನಡಿಗೆ, ಲಘು ವ್ಯಾಯಾಮ ಹಾಗೂ ಆಹಾರದಲ್ಲಿ ಪಥ್ಯವನ್ನು ಹೊಂದುವುದು ಉತ್ತಮ ವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಯೇ ಹೆಚ್ಚಾಗಿ ಹೃದಯ ಸಂಬ0ಧೀ ಕಾಯಿಲೆಗಳಿಂದ ಸಾಯುತ್ತಿರುವುದು ಅತ್ಯಂತ ಖೇದಕರ ಸಂಗಾತಿಯಾಗಿದೆ. ಇವುಗಳಿಗೆ ಮುನ್ನೆಚ್ಚರಿಕೆಯೇ ಪರಿಹಾರ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ  ರಶ್ಮಿತಾ ಜೈನ್‌ರವರು, ವಿದ್ಯಾರ್ಥಿ ಜೀವನದಿಂದಲೇ ಆರೋಗ್ಯದಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು ಹಾಗೂ ತನ್ನ ಪರಿಸರದ ಜನರಲ್ಲಿ ಹೃದಯ ಸಂಬ0ಧೀ ಕಾಯಿಲೆಗಳ ಕುರಿತಾಗಿ ಜಾಗೃತಿ ಮೂಡಿಸಬೇಕು ಎಂದರು. ಪ್ರೌಢಶಾಲಾ ಮುಖ್ಯಶಿಕ್ಷಕರಾದ ಶಿವಪ್ರಸಾದ್ ಭಟ್‌ರವರು ಕಾರ್ಯಕ್ರಮ ನಿರ್ವಹಿಸಿದರು.

Share

Leave a Reply

Your email address will not be published. Required fields are marked *