ಎಲ್ಲರನ್ನು ಒಗ್ಗೂಡಿಸುವ ಕಾರ್ಯವನ್ನು ಗಾಂಧಿ ಮಾಡಿದ್ದರು: ಅರವಿಂದ ಚೊಕ್ಕಾಡಿ

ಮೂಡುಬಿದಿರೆ: ದೇಶದಾದ್ಯಂತ ಸ್ವತಂತ್ರ ಅಸ್ತಿತ್ವಗಳಿದ್ದವು. ಅದನ್ನು ಒಗ್ಗೂಡಿಸುವ ಕಾರ್ಯ ಮಹಾತ್ಮ ಗಾಂಧಿ ಮಾಡಿದ್ದರು. ಇರುವಂತದ್ದು ಒಟ್ಟಾಗಿ ಸೇರಿಸುವುದು ಮಹತ್ವದ ವಿಚಾರವಾಗಿದೆ. ಅದನ್ನು ಸಮರ್ಥವಾಗಿ ಮಾಡಿದ ಹಿರಿಮೆ ಮಹಾತ್ಮ ಗಾಂಧಿಯವರದ್ದು ಎಂದು ಖ್ಯಾತ ಚಿಂತಕ, ಗಾಂಧಿ ವಿಚಾರ ವೇದಿಕೆಯ ಮಾತೃಸಮಿತಿ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಹೇಳಿದರು.


ಗಾಂಧಿ ವಿಚಾರ ವೇದಿಕೆ ಮೂಡುಬಿದಿರೆ ಶಾಖೆಯ ಆಶ್ರಯದಲ್ಲಿ ಸಮಾಜ ಮಂದಿರ ಸಭಾದಲ್ಲಿ ನಡೆದ ಗಾಂಧಿ ಜಯಂತಿ ಆಚರಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ `ಗಾಂಧಿ ಚಿಂತನೆಗಳು ಮತ್ತು ವರ್ತಮಾನದ ಭಾರತ’ ವಿಚಾರದಲ್ಲಿ ಉಪನ್ಯಾಸ ಮಾಡಿದರು. ರಾಷ್ಟಿçÃಯತೆ ರೂಪಿಸಿದವರು ಮಹಾತ್ವಾ ಗಾಂಧೀಜಿ. ಒಂದಕ್ಕೊAದು ಸಂಪರ್ಕ ಕಲ್ಪಿಸಿ ಇಡೀ ರಾಷ್ಟçವನ್ನು ಒಂದು ವಿಚಾರಕ್ಕೆ ಒಗ್ಗೂಡಿಸಿ ಭಾವೈಕ್ಯತೆ ಮೂಡಿಸಿದ, ಏಕಾತ್ಮತೆಯಲ್ಲಿ ಪೋಣಿಸುವ ಶಕ್ತಿಯನ್ನು ಗಾಂಧಿ ಮಾಡಿದರು. ಅವರ ಚಿಂತನೆ ಇಂದಿಗೂ ಪ್ರಸ್ತುತ. ಗಾಂಧೀಜಿ ರೂಪಿಸಿಕೊಟ್ಟ ಸಮಗ್ರತೆಯ ಪರಿಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ, ಅದು ಆಗಬೇಕಾಗಿದೆ ಎಂದು ಹೇಳಿದರು. ವಿಚಾರ ವೇದಿಕೆಯ ಅಧ್ಯಕ್ಷ ಡಾ. ಪ್ರಭಾತ್ ಬಲ್ನಾಡ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಂಕರ ನಾಯ್ಕ್ ಉಪಸ್ಥಿತರಿದ್ದರು. ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಸುಧಾ ರಾಣಿ ಕಾರ್ಯಕ್ರಮ ನಿರ್ವಹಿಸಿದರು. ತುಕ್ರಪ್ಪ ಕೆಂಬಾರೆ ಪರಿಚಯಿಸಿದರು.

Share

Leave a Reply

Your email address will not be published. Required fields are marked *