ಮೂಡುಬಿದಿರೆ: ಕೆ.ಎನ್ ಭಟ್ ಶಿರಾಡಿ ಪಾಲ್ ಶತಮಾನೋತ್ಸವ ಸಂಸ್ಮರಣಾ ಅಭಿಯಾನದಂಗವಾಗಿ ೨೯ನೆಯ ಸನ್ಮಾನವನ್ನು ಡಾ.ರಾಮಕೃಷ್ಣ ಶಿರೂರು ಅವರಿಗೆ ನೀಡಿ ಪುರಸ್ಕರಿಸಲಾಯಿತು. ಶಾಸಕ ಉಮಾನಾಥ ಎ ಕೋಟ್ಯಾನ್ ಅವರ `ಸೇವಕ’ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ, ಶಾಸಕ ಉಮಾನಾಥ ಎ ಕೋಟ್ಯಾನ್, ಸಮಿತಿಯ ಗೌರವ ಸಲಹೆಗಾರ ಶ್ರೀಪತಿ ಭಟ್, ಸಂಘಟಕ ಕೃಷ್ಣ ಕುಮಾರ್ ಹಾಗೂ ಪತ್ರಕರ್ತ ಹರೀಶ್ ಕೆ ಆದೂರು ಉಪಸ್ಥಿತಿಯಲ್ಲಿ ರಾಮಕೃಷ್ಣ ಶಿರೂರು ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.