ಯುವರಾಜ್ ಜೈನ್ ಅವರಿಗೆ ಸಮಾಜ ಮಂದಿರ ಪುರಸ್ಕಾರ

ಮೂಡುಬಿದಿರೆ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ, ದಶಕದ ಹಿಂದೆ ಕಲ್ಲಬೆಟ್ಟು ಪರಿಸರದಲ್ಲಿ `ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆ’ಗಳನ್ನು ಸ್ಥಾಪಿಸಿದ ಯುವರಾಜ್ ಜೈನ್ ಅವರನ್ನು ಮೂಡುಬಿದಿರೆ ಸಮಾಜ ಮಂದಿರ ಸಭಾ ೭೬ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ಕೊಡಮಾಡುವ `ಸಮಾಜ ಮಂದಿರ ಪುರಸ್ಕಾರ’ಕ್ಕೆ ಆಯ್ಕೆಮಾಡಲಾಗಿದೆ. ಶಿಕ್ಷಕರಾಗಿ, ಉಪನ್ಯಾಸಕರಾಗಿ, ನಂತರ ಕೋಚಿಂಗ್ ಸೆಂಟರ್ ಮೂಲಕ ವೃತ್ತಿ ಜೀವನ ಆರಂಭಿಸಿದ ಯುವರಾಜ್ ಜೈನ್ ಸ್ವ ಪ್ರಯತ್ನದಿಂದ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರು.  ರೋಟರಿ, ಜೇಸಿ ಮೂಲಕ ಸಮಾಜ ಸೇವೆ ಮಾಡಿದ ಇವರು, ಹಲವಾರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ರಾಷ್ಟ್ರೀಯ ಕಮಲ ಪತ್ರ, ರಾಜ್ಯ ಮಟ್ಟದ ಶಿಕ್ಷಣ ರತ್ನ, ಸಾಧನಶ್ರೀ ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದೆ.

Share

Leave a Reply

Your email address will not be published. Required fields are marked *