ವ್ಯಾಂಕೋವರ್ ಜೈನ್ ಸೆಂಟರ್ ಅಹ್ವಾನ ಮೇರೆಗೆ ಮೂಡುಬಿದಿರೆ ಜೈನಮಠದ ಶ್ರೀಗಳು ೧೦ದಿನಗಳ ಯಶಸ್ವೀ ವಿದೇಶ ಧಾರ್ಮಿಕ ಪ್ರವಾಸ ಕೈಗೊಂಡು ದೆಹಲಿ ತಲುಪಿದ್ದಾರೆ. ದಿಗಂಬರ ಜೈನ್ ಸಮಿತಿಯ ಕಾರ್ಯಾಧ್ಯಕ್ಷ ಮಣಿಂದ್ರ ಜೈನ್ ಪೂಜ್ಯರನ್ನು ಶ್ರದ್ದಾ ಭಕ್ತಿಯಿಂದ ಸ್ವಾಗತಿಸಿದರು. ದೆಹಲಿಯಿಂದ ಕೊಟ್ಟಾಯಂನಲ್ಲಿ ಎಷ್ಯಾ ಕ್ರೆöÊಸ್ತ ಸಮಾವೇಶ ಅಂತರರಾಷ್ಟಿçÃಯ ಸಮ್ಮೇಳನದಲ್ಲಿ ಭಾಗವಹಿಸಿದರು.
ವರ್ಷಂಪ್ರತಿ ಜರುಗುವ ದಶಲಕ್ಷಣ ಮಹಾ ಪರ್ವವು ಬಾದ್ರಪದ ಚತುರ್ಥಿಯಿಂದ ಹುಣ್ಣಿಮೆವರೆಗೆ ಕೆನಡಾದಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಿತು. ಸ್ವಾಮೀಜಿ ಪ್ರತಿನಿತ್ಯ ಬೆಳಿಗ್ಗೆ ೩ಗಂಟೆ ಅಭಿಷೇಕ ಪೂಜೆ ದಶಮಂಡಲ ಆರಾಧನೆಗೆ ನೇತೃತ್ವ ವಹಿಸಿ ಮಾರ್ಗದರ್ಶನ ಮಾಡಿದರು.