ಮೂಡುಬಿದಿರೆ: ಸಮೀಪದ ಪಡುಕೊಣಾಜೆ ದೇರೊಟ್ಟು ಎಂಬಲ್ಲಿ ಚಿರತೆಯೊಂದು ಮನೆಯಂಗಳದಲ್ಲಿ ಕಟ್ಟಿದ್ದ ನಾಯಿಯನ್ನು ಕೊಂಡೊಯ್ದಿದೆ. ಮನೆಯಲ್ಲಿ ತಾಯಿ ಮಗಳು ಮಾತ್ರ ವಾಸವಿದ್ದು ಇದೀಗ ಭಯದಿಂದ ದಿನ ಕಲೆಯುವಂತಾಗಿದೆ. ದೇರೊಟ್ಟು ವಸಂತಿ ಎಂಬವರ ಮನೆಯಲ್ಲಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದ್ದು, ಚಿರತೆಯ ಹೆಜ್ಜೆಗಳು ಅಂಗಳದಲ್ಲಿ ಮೂಡಿವೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಮೂಡುಬಿದಿರೆ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಅತಿಯಾಗಿವೆ. ಅರಣ್ಯ ಇಲಾಖೆ ಇವುಗಳನ್ನು ಹಿಡಿಯುವ ಕಾರ್ಯವನ್ನು ಮಾಡಿದ್ದಾರೆ. ಇತ್ತೀಚೆಗೆ ಚಿರತೆ ಸಂಚಾರ ಸಿಸಿ ಕ್ಯಮರಾದಲ್ಲಿ ಸೆರೆಯಾಗಿತ್ತು.