ಮೂಡುಬಿದರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಗೈಡ್ಸ್ ಘಟಕ, ಇಂಟರಾಕ್ಟ್ ಕ್ಲಬ್, ಶಾಲಾ ಸಂಸತ್ತು ಹಾಗೂ ಮೂಡುಬಿದರೆ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಸಂರಕ್ಷಣಾ ಅಭಿಯಾನ ನಡೆಯಿತು. ಮೂಡುಬಿದಿರೆಯ ಮಾರುಕಟ್ಟೆ ಸಮೀಪದಲ್ಲಿ ನಡೆದ ಈ ಜನ ಜಾಗೃತಿ ಕಾರ್ಯಕ್ರಮ ನಡೆಯಿತು. ಸ್ಪೂರ್ತಿ ವಿಶೇಷ ಶಾಲೆಯ ಮಕ್ಕಳು ತಯಾರಿಸಿದ ಬಟ್ಟೆಯ ಕೈ ಚೀಲಗಳನ್ನು ಖರೀದಿಸಿ ಶಾಲಾ ಮಕ್ಕಳು ಜನರಿಗೆ ವಿತರಿಸಿದರು. ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವಂತೆ ವಿನಂತಿಸಿದರು.
ಸ್ಪೂರ್ತಿ ವಿಶೇಷ ಶಾಲೆಯ ಮಕ್ಕಳು ತಯಾರಿಸಿದ ಬಟ್ಟೆ ಚೀಲಗಳನ್ನು ಖರೀದಿಸಿ, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ಸ್, ಎನ್.ಸಿ.ಸಿ ವಿದ್ಯಾರ್ಥಿಗಳು ಮೂಡುಬಿದರೆಯ ಮಾರುಕಟ್ಟೆಯಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನದಲ್ಲಿ ಸಾರ್ವಜನಿಕರಿಗೆ ವಿತರಿಸಿದರು. ಸಂಗ್ರಹವಾದ ಹಣವನ್ನು ಸ್ಪೂರ್ತಿ ವಿಶೇಷ ಶಾಲೆಗೆ ಆರ್ಥಿಕ ನೆರವಿನ ರೂಪದಲ್ಲಿ ಹಸ್ತಾಂತರಿಸಲಾಯಿತು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢ ವಿಭಾಗದ ಹಿರಿಯ ಸಂಯೋಜಕರಾದ ಗಜಾನನ ಮರಾಠೆ, ಸಂಧ್ಯಾ ಆರ್ ಶೆಣೈ ಸ್ಪೂರ್ತಿ ವಿಶೇಷ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿಗಾರ್, ಶಾಲೆಯ ಪ್ಲಾಸ್ಟಿಕ್ ಮುಕ್ತ ಅಭಿಯಾನದ ರಾಯಭಾರಿ ಮೋಹನ್ ಹೊಸ್ಮಾರ್, ಆಡಳಿತಾಧಿಕಾರಿ ನಿತೇಶ್ ಕುಮಾರ್ ಮ್ಯಾನೇಜರ್ ಸತೀಶ್ ಉಪಸ್ಥಿತರಿದ್ದರು