ನಾಡಿಗಾಗಮಿಸುತ್ತಿದೆ ಕಾಡಾನೆಗಳು… ಭೀತಿಯಲ್ಲಿ ಸಾರ್ವಜನಿಕರು
ದಕ್ಷಿಣ ಕನ್ನಡ: ಜಿಲ್ಲೆಯ ಕಡಬ ಪರಿಸರದಲ್ಲಿ ಕಾಡಾನೆ ಹಾವಳಿ ಹೆಚ್ಚಿದೆ. ಐತ್ತೂರು ಗ್ರಾಮದ ನೆಲ್ಯಡ್ಕದಲ್ಲಿ ಕೂಲಿ ಕಾರ್ಮಿಕರೊಬ್ಬರನ್ನು ಸೊಂಡಿಲಲ್ಲಿ ಎತ್ತಿ ರಸ್ತೆಯ ಮತ್ತೊಂದು ಮಗ್ಗಲಿಗೆ ಎಸೆದು ಪರಾಕ್ರಮ ಮೆರೆದಿದೆ. ನೆಲ್ಯಡ್ಕದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆ, ನಡೆದುಕೊಂಡು ಹೋಗುತ್ತಿದ್ದ ಐತ್ತೂರು ಗ್ರಾಮದ ಗೇರ್ತಿಲ ಚೋಮ ಪೂಜಾರಿ ಎಂಬವರನ್ನು ಸೊಂಡಿಲಲ್ಲಿ ಎತ್ತಿ ಎಸೆದಿದೆ.
ಅದೃಷ್ಟವಶಾತ್ ಅದೇ ಸಂದರ್ಭದಲ್ಲಿ ಕಾರೊಂದು ಬಂದಿದ್ದು, ಆನೆ ಸ್ಥಳದಿಂದ ಕಾಲ್ಕಿತ್ತಿದೆ. ಕಾರಿನಲ್ಲಿದ್ದವರು ಚೋಮ ಪೂಜಾರಿಯವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಡು ಪ್ರಾಣಿಗಳು ನಾಡಿಗೆ ದಾಳಿಯಿಡುತ್ತಿರುವುದು ಹೆಚ್ಚಿದ್ದು, ಜನತೆ ಜೀವಭಯದಿಂದ ಸಂಚರಿಸುವ0ತಾಗಿದೆ.