ಶ್ರೀಮಂತ ಪರಂಪರೆಯನ್ನು ಉಳಿಸುವ ಅವಶ್ಯಕತೆಯಿದೆ: ಡಾ. ಸುಧಾರಾಣಿ

ಮೂಡುಬಿದಿರೆ: ಭಾರತೀಯ ಪರಂಪರೆಯೆಂದರೆ ಅದು ಶ್ರೀಮಂತ ಪರಂಪರೆ. ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಯುಳ್ಳ ಅತ್ಯಂತ ಮೌಲ್ಯಯುತವಾದ ಪರಂಪರೆಯನ್ನು ನಾಳೆಗೆ ಉಳಿಸುವ ಅವಶ್ಯಕತೆಯಿದೆ. ಭಾರತೀಯ ಪರಂಪರೆ ಗಟ್ಟಿಯಾದ ಸತ್ವವನ್ನು ಒಳಗೊಂಡಿದೆ. ಉದಾರತೆ ಹಾಗೂ ಸಾಮರಸ್ಯದ ವಿಚಾರವನ್ನು ತಿಳಿಹೇಳುವ ಅತ್ಯಂತ ವೈಶಿಷ್ಟ್ಯ ಪೂರ್ಣವಾದ ಪರಂಪರೆ ಭಾರತೀಯ ಪರಂಪರೆಯಾಗಿದೆ ಎಂದು ಡಾ. ಸುಧಾರಾಣಿ ವಿಶ್ಲೇಷಿಸಿದರು. ಜೈನ ಪದವಿಪೂರ್ವ ಕಾಲೇಜಿನ ಹೆರಿಟೇಜ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪಾನ್ಯಾಸ ನೀಡಿದರು. ಪರಂಪರೆಯ ಬಗ್ಗೆ ಯುವ ಪೀಳಿಗೆ ಗೌರವ ಇರಿಸಿಕೊಳ್ಳಬೇಕು ಎಂದ ಅವರು, ಹಂಸ ಕ್ಷೀರ ನ್ಯಾಯದಂತೆ ಉತ್ತಮ ಅಂಶವನ್ನು ಸ್ವೀಕರಿಸಿ, ಅದನ್ನು ಇತರರಿಗೆ ತಲುಪಿಸುವ ಕಾರ್ಯ ಆಗಲಿ ಎಂದು ಆಶಿಸಿದರು. ಕೆ. ಎನ್. ಭಟ್ ಶಿರಾಡಿಪಾಲ್ ಓರ್ವ ಅಸಾಧಾರಣ ವ್ಯಕ್ತಿತ್ವದವರು. ಅವರ ಜೀವನಾದರ್ಶಗಳು ಇಂದಿಗೂ ಪ್ರಸ್ತುತ, ಹಾಗೂ ಅನುಸರಣೀಯವಾಗಿದೆ ಎಂದು ಸುಧಾರಾಣಿ ಹೇಳಿದರು.
ಕೆ.ಎನ್ ಭಟ್ ಶಿರಾಡಿ ಪಾಲ್ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಶತ ನಮನ ಶತಸನ್ಮಾನದಂಗವಾಗಿ  ಡಾ. ಸುಧಾರಾಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇತಿಹಾಸ ಗೊತ್ತಿಲ್ಲದಿದ್ದವರು ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಭಾರತದ ಭವ್ಯ ಇತಿಹಾಸ ಅರಿಯುವಂತಾಗಬೇಕೆಂದು ಅತಿಥಿ, ಜಿ ವಿ ಗಜೇಂದ್ರ ಅಭಿಪ್ರಾಯಿಸಿದರು.
ಕನ್ನಡ ವಿಭಾಗ ಮುಖ್ಯಸ್ಥ ಉದಯ ಕುಮಾರ್ ಅಧ್ಯಕ್ಷತೆ ವಹಿಸಿ, ಕೆ. ಎನ್. ಭಟ್ ಶಿರಾಡಿ ಪಾಲ್ ಅವರ ಸಂಪೂರ್ಣ ಜೀವನ ಇಂದಿನ ಯುವ ಜನತೆಗೆ ಸ್ಫೂರ್ತಿಯಾಗಬೇಕಾಗಿದೆ ಎಂದರು.
ವಕೀಲೆ ಶ್ವೇತಾ ಜೈನ್, ಶಿರಾಡಿ ಪಾಲ್ ಅವರ ಪುತ್ರಿಯರಾದ ವಿದ್ಯಾ ಡೋಂಗ್ರೆ, ನಿವೇದಿತಾ ಗಜೇಂದ್ರ, ಅಳಿಯ ವಸಂತ ಡೋಂಗ್ರೆ, ಆಶಾ ಅಜಿತ್ ಹೆಬ್ಬಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಘಟಕ, ಪತ್ರಕರ್ತ ಕೃಷ್ಣ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಶಿರಾಡಿ ಪಾಲ್ ಅವರು ಜೀವನದುದ್ದಕ್ಕೂ ಕಾರ್ಯನಿರ್ವಹಿಸಿದ ವಿವಿಧ ಕ್ಷೇತ್ರಗಳನ್ನು ಶತಮಾನೋತ್ಸವದ ಸಂದರ್ಭದಲ್ಲಿ ಮೆಲುಕು ಹಾಕಿ ಅಂತಹ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಹುಡುಕಿ ಗೌರವಿಸುತ್ತಿದ್ದೇವೆ. ತನ್ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಹೆರಿಟೇಜ್ ಕ್ಲಬ್ ಕಾರ್ಯದರ್ಶಿ ದೀಪ್ತಿ ಸ್ವಾಗತಿಸಿದರು. ಸುಷ್ಮಿತ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತ ಹರೀಶ್ ಕೆ. ಆದೂರು ವಂದಿಸಿದರು.
Share

Leave a Reply

Your email address will not be published. Required fields are marked *