ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ಇದರ ಆಶ್ರಯದಲ್ಲಿ ಮೂಡುಬಿದಿರೆ ಶ್ರೀ ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಸಮಾಜ ಮಂದಿರದಿAದ ಹೊರಟು ಆಲಂಗಾರು ಬಡಗು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಮುಗಿಸಿ ವಿಗ್ರಹವನ್ನು ಮಾನಸ ಗಂಗೋತ್ರಿ ಸರೋವರದಲ್ಲಿ ಜಲಸ್ತಂಭನ ಮಾಡಲಾಗುತ್ತದೆ.
ಶೋಭಾಯಾತ್ರೆಯಲ್ಲಿ ವೈವಿಧ್ಯಮಯ ಟ್ಲಾಬ್ಲೋಗಳು ಗಮನ ಸೆಳೆದವು. ತುಳುನಾಡಿನ ದೈವಾರಾಧನೆಯ ಟ್ಯಾಬ್ಲೋ, ಹುಲಿವೇಷ, ಚಂದ್ರಯಾನ, ಬೃಹತ್ ಶಿವನ ಮೂರ್ತಿ,ಶಂಕರಾಚಾರ್ಯ ಕೊಲ್ಲೂರು ಮುಕಾಂಬಿಕೆ, ಕುಣಿತ ಭಜನೆ, ಹುಲಿವೇಷ, ಹೀಗೆ ಹಲವು ಆಕರ್ಷಕ ವೇಷಭೂಷಣಗಳು, ಕವಾಯತ್ ಗಮನ ಸೆಳೆದವು.
ಮೂಡುಬಿದಿರೆಯ ಆಸು ಪಾಸುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಿ ಶೋಭಾಯಾತ್ರೆಯನ್ನು ಕಣ್ ತುಂಬಿಕೊ0ಡರು.