ರೋಗಿಗಳೇ ಹುಷಾರ್… ಸರಕಾರಿ ಆಸ್ಪತ್ರೆಗಳಲಿ ಔಷಧಿ ಪರೀಕ್ಷಿಸಿ ಸೇವಿಸಿ…

ಮಂಗಳೂರು: ಆರೋಗ್ಯ ಕೇಂದ್ರದಲ್ಲಿ ರೋಗ ಶಮನಕ್ಕೆ ಬರುವವರಿಗೆ ಇವರು ಕೊಡುವುದು ಇದನ್ನಾ…? ಸರಕಾರಿ ಆಸ್ಪತ್ರೆ ಎಂದರೆ ಈ ರೀತಿ ಇರುವುದೇ? ಜನ ಆಸ್ಪತ್ರೆಯನ್ನು ನಂಬಿ ಬರ್ತಾರೆ. ಆದರೆ ಜನರ ನಂಬಿಕೆ, ವಿಶ್ವಾಸಗಳಿಗೆ ಆರೋಗ್ಯ ಕೇಂದ್ರ, ಅಲ್ಲಿರುವ ವೈದ್ಯರು ದ್ರೋಹ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ಉಪಯೋಗ ಶೂನ್ಯವಾದ ಔಷಧಿ ಮಾತ್ರೆಗಳನ್ನು ವಿತರಿಸಿ ಮತ್ತೊಂದು ರೋಗಕ್ಕೆ ಕಾರಣವಾಗುತ್ತಿದೆ ಈ ಆರೋಗ್ಯ ಕೇಂದ್ರ.


ಉಳ್ಳಾಲ ಬೀರಿ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ರೋಗಿಗಳ ಆರೋಗ್ಯದೊಂದಿಗೆ ಚೆಲ್ಲಾಟವಾಡಿದ್ದಾರೆ. ವೈದ್ಯರ ನಡೆಯನ್ನು ಖಂಡಿಸಿ ರೋಗಿಗಳ ಸಂಬAಧಿಗಳು ಗರಂ ಆಗಿದ್ದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಹಸೈನಾರ್ ಎಂಬವರ ಪತ್ನಿ ಹಾಗೂ ಆರನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ರಾಫಿಯಾ ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಔಷಧಿ ಪಡಕೊಳ್ಳಲು ಹೋಗಿದ್ದರು. ತಪಾಸಣೆ ನಡೆಸಿದ ವೈದ್ಯರು ಎರಡು ದಿನಕ್ಕೆ ಗುಳಿಗೆ ನೀಡಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಾತ್ರೆಯನ್ನು ಪ್ಯಾಕ್‌ನಿಂದ ತೆರೆದು, ಸೇವಿಸಲು ನೋಡಿದಾಗ ಮಾತ್ರೆಗಳಲ್ಲಿ ಫಂಗಸ್ ಕಂಡು ಬಂದಿದೆ. ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ಎಲ್ಲವೂ ಹೀಗೇ ಇವೆ. ಚೆನ್ನಾಗಿದೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಇಬ್ಬರೂ ಮಾತ್ರೆಯ ಫೋಟೋ ತೆಗೆದು ವೈದ್ಯಾಧಿಕಾರಿಗಳಿಗೆ ಕಳಿಸಿ ದೂರು ನೀಡಿದ್ದಾರೆ.

Share

Leave a Reply

Your email address will not be published. Required fields are marked *