ಮೂಡುಬಿದಿರೆ: ಹೋಲಿ ರೋಸರಿ ಪ್ರೌಢಶಾಲೆಯ ಡಾ. ರಾಮಕೃಷ್ಣ ಶಿರೂರು ಇವರು ಕರುನಾಡ ಹಣತೆ ಕವಿ ಬಳಗ ಇವರು ನೀಡುವ ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿ- 2023ರ ರಾಜ್ಯಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ.
2023 ಸೆಪ್ಟೆಂಬರ್ 24 ರಂದು ಶಿರಸಿಯ ನೆಮ್ಮದಿ ಕುಟೀರ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿ ಕಲಾತಂಡ (ರಿ) ರಾಜ್ಯ ಅಧ್ಯಕ್ಷ ಶ್ರೀ ಎಸ್. ರಾಜು ಸೂಳೇನಹಳ್ಳಿ ಅವರು ತಿಳಿಸಿರುತ್ತಾರೆ
ಶಿಕ್ಷಣ ಕ್ಷೇತ್ರ, ಶಿಕ್ಷಕ ಸಂಘಟನಾ ಕ್ಷೇತ್ರ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.