ಮಂಗಳೂರು: ಕರಾವಳಿ ಭಾಗದ ಜನತೆಯ ಆರಾಧ್ಯ ದೇವಿಯಾದ ಕಟೀಲಿನ ತಾಯಿ ದುರ್ಗಾಪರಮೇಶ್ವರಿ ಅಮ್ಮನ ದರುಶನವನ್ನು ಖ್ಯಾತ ನಟ ಅನಂತನಾಗ್ ಪಡೆದರು. ಕ್ಷೇತ್ರಕ್ಕೆ ಆಗಮಿಸಿ ದೇವಿಯ ದರುಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ಷೇತ್ರದ ವತಿಯಿಂದ ಆತ್ಮೀಯವಾಗಿ ಗೌರವಿಸಿ, ಶ್ರೀ ಕ್ಷೇತ್ರದ ಪ್ರಸಾದ ನೀಡಲಾಯಿತು. ಮಂಗಳೂರಿನಲ್ಲಿ ಅನಂತಾಭಿನAದನ ಕಾರ್ಯಕ್ರಮ ನಡೆದಿದ್ದು, ಅದಾದ ಬಳಿಕ ಕರಾವಳಿಯ ಪ್ರಭಾವೀ ಕಾರಣೀಕ ಕ್ಷೇತ್ರ ಕಟೀಲಿಗೆ ಭೇಟಿ ನೀಡಿದ್ದಾರೆ.