ವೇಣೂರು: ಪಡ್ಡಂದಡ್ಕ ಗಾಂಧೀನಗರದಲ್ಲಿ ವಿಶಾಲ್ ಟೂರಿಸ್ಟ್ ಬಸ್ ಪಲ್ಟಿಯಾಗಿ ಒಂದು ತಾಸಿಗೂ ಅಧಿಕ ರಸ್ತೆ ತಡೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಸ್ಥಳೀಯರಾಗಮಿಸಿದ್ದಾರೆ. ರಸ್ತೆಗೆ ಅಡ್ಡವಾಗಿ ಬಸ್ಸು ಬಿದ್ದು ರಸ್ತೆ ತಡೆ ಉಂಟಾಗಿದೆ. ೧೧.೩೦ರ ಸುಮಾರಿಗೆ ಕ್ರೇನ್ ಮೂಲಕ ಬಸ್ಸನ್ನು ಪಕ್ಕಕ್ಕೆ ಸರಿಸುವ ಕಾರ್ಯ ಆರಂಭವಾಗಿದೆ. ಅತಿಯಾದ ವೇಗವೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿದ್ದ ಬಹುತೇಕ ಎಲ್ಲಾ ಮಂದಿಗೂ ಗಾಯಗಳಾಗಿವೆ.
ಅನೇಕಮಂದಿಗೆ ಗಾಯಗಳಾಗಿವೆ. ತಾಕೋಡೆ ಸಮೀಪದ ವೃದ್ಧರಿಗೆ ಹೆಚ್ಚಿನ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ವಿಶಾಲ್ ಟೂರಿಸ್ಟ್ ಆಗಿದ್ದು, ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ, ಗಾಂಧೀನಗರದ ನಡುವೆ ಅಪಘಾತಕ್ಕೀಡಾಗಿದೆ.
ಒಟ್ಟು ೨೭ಮಂದಿ ಪ್ರಯಾಣಿಕರಿದ್ದರು.
ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಊರವರು ಜಮಾಯಿಸಿದ್ದಾರೆ. ತಕ್ಷಣ ಅಂಬ್ಯುಲೆನ್ಸ್ ಸೇವೆಯ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.