ಮೂಡುಬಿದಿರೆ:ಪುತ್ತಿಗೆ ಸಮೀಪದ ಹಂಡೇಲಿನಲ್ಲಿ ಬುಧವಾರ ಚಲಿಸುತ್ತಿದ್ದ ಓಮ್ನಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ವಾಹನ ಬಹುತೇಕ ಸುಟ್ಟು ಹೋಗಿದೆ.
ಓಮ್ನಿಯಲ್ಲಿ ಗ್ಯಾಸ್ ಸಿಲಿಂಡರನ್ನು ಅಳವಡಿಸಲಾಗಿತ್ತೆನ್ನಲಾಗಿದ್ದು ಅದರಲ್ಲಿ ಸೋರಿಕೆ ಉಂಟಾಗಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಓಮ್ನಿ ಚಾಲಕ ಸೇರಿದಂತೆ ಇಬ್ಬರು ವಾಹನದಲ್ಲಿದ್ದು ಬೆಂಕಿ ಕಾಣಿಸಿಕೊಂಡ ತಕ್ಷಣ ಅವರು ವಾಹನ ನಿಲ್ಲಿಸಿ ಹೊರಗಡೆ ಓಡಿ ಬಂದರೆನ್ನಲಾಗಿದೆ. ಈ ವಾಹನ ಹಂಡೇಲು ಸಮೀಪದ ವ್ಯಕ್ತಿಯೊಬ್ಬರಿಗೆ ಸೇರಿದ್ದೆನ್ನಲಾಗಿದೆ.