ಬಂಟ್ವಾಳ: ಆರದಿರಲಿ ಬದುಕು ಆರಾಧನ ತಂಡದ ಜೂನ್ ತಿಂಗಳ ಸಹಾಯ ಹಸ್ತವನ್ನು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಬಾಳ್ತಿಲ ಗ್ರಾಮದ ಗಣೇಶ್ ಅವರ ಪೋಷಕರಿಗೆ ಹಸ್ತಾಂತರಿಸಲಾಯಿತು. ಕಿಡ್ನಿ ಹಾಗು ಹೃದಯ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿದ್ದ ಗಣೇಶ್ ಅವರ ಚಿಕಿತ್ಸೆಗಾಗಿ ಸಹಾಯಧನವನ್ನು ಅವರ ಅಮ್ಮ ವಿಜಯಲಕ್ಷ್ಮಿ ಅವರಿಗೆ ಹಸ್ತಾಂತರಿಸಲಾಯಿತು. ಸಂಘಟನೆಯ ಸಂಸ್ಥಾಪಕಿ ಪದ್ಮಶ್ರೀ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಉಪಸ್ಥಿತರಿದ್ದರು.