ಮಂಗಳೂರು: ಜ್ಯೋತಿಷ್ಯ ಶಾಸ್ತ್ರ ಎಂದಿಗೂ ಸುಳ್ಳಾಗದು… ಭವಿಷ್ಯ ಸುಳ್ಳಾಗಲೂ ಇಲ್ಲ. ಇದು ಸ್ಪಷ್ಟವಾಗಿದೆ. ಚುನಾವಣಾ ಪೂರ್ವದಲ್ಲಿ ಜ್ಯೋತಿಷ್ಯ ಪ್ರಕಾರ ಭವಿಷ್ಯ ಹೇಳಲಾಗಿತ್ತು. ಅದರಂತೆ
ದಕ್ಷಿಣ ಕನ್ನಡ ವಿಧಾನ ಸಭಾ ಕ್ಷೇತ್ರದ ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಮಂಗಳೂರು ಹಾಗೂ ಉಡುಪಿಯ ಐದು ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಭಾರಿಸಿದ್ದಾರೆ. ಕರಾವಳಿಯ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.
ಕಾಂಗ್ರೆಸ್ ಇಬ್ಬಾಗವಾಗುತ್ತಾ? : ಇತ್ತ ಕಾಂಗ್ರೆಸ್ ಸ್ಪಷ್ಟ ಬಹುಮತವೇನೋ ಬಂದಿದೆಯಾದರೂ ಕಾಂಗ್ರೆಸ್ ಅವಧಿಪೂರ್ಣ ಸರಕಾರ ನೀಡುತ್ತದೆಯೇ ಎಂಬ ಜಿಜ್ಞಾಸೆಯೂ ಮೂಡಿದೆ. ಕಾಂಗ್ರೆಸ್ ನಲ್ಲಿ ಈಗಾಗಲೇ ಬಣ ರಾಜಕೀಯವಿದ್ದು, ಈ ಬಣ ರಾಜಕೀಯದಿಂದಾಗಿ ಕಾಂಗ್ರೆಸ್ ಒಡೆದು ಹೋಳಾಗುವುದೇ ಎಂಬ ಸಂದೇಹವೂ ಮೂಡತೊಡಗಿದೆ. ಬಿಜೆಪಿಯ ಚಾಣಾಕ್ಷ್ಯ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಅಬ್ಬರದ ಪ್ರಚಾರ ಮಾಡಿದರೂ ಬಿಜೆಪಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಏತನ್ಮಧ್ಯೆ ʻಆಪರೇಷನ್ʼ ಮೂಲಕವಾದರೂ ಅಧಿಕಾರ ಹಿಡಿಯುವ ತಂತ್ರವನ್ನು ಬಿಜೆಪಿ ರೂಪಿಸುತ್ತಿದ್ದು, ಇದು ಸಂಭವಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.