ಮೂಡುಬಿದಿರೆ: ಚುನಾವಣೆಗೆ ಕ್ಷಣ ಗಣನೆ ಆರಂಭವಾಗುತ್ತಿದೆ. ಎಲ್ಲಾ ಪಕ್ಷಗಳೂ ಅಂತಿಮ ಹಂತದಲ್ಲಿ ಜನತೆಯೆದುರು ಹೋಗುತ್ತಿದ್ದಾರೆ. ಮೂಡಬಿದಿರೆಯಲ್ಲಿ ಮೊಟ್ಟಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಸ್ಪರ್ಧಿಸುತ್ತಿದ್ದು, ಅಭ್ಯರ್ಥಿ ವಿಜಯನಾಥ ವಿಠಲ ಶೆಟ್ಟಿಯವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮೂಡುಬಿದಿರೆ, ಮುಲ್ಕಿ, ಕಿನ್ನಿಗೋಳಿ, ಬಜಪೆ ಭಾಗಗಳಲ್ಲಿ ಜನತೆಯ ಬಳಿ ತೆರಳಿ ಆಮ್ ಆದ್ಮಿ ಪಕ್ಷದ ವಿಚಾರ, ಇಡೀ ಕ್ಷೇತ್ರದ ಅಭಿವೃದ್ಧಿಯ ವಿಚಾರವನ್ನು ವಿವರಿಸಿ ಮತಯಾಚಿಸಿದ್ದಾರೆ.
ಭವಿಷ್ಯದ ಹೈಟೆಕ್ ಮೂಡುಬಿದಿರೆ ಚಿಂತನೆಯೊಂದಿಗೆ, ಒಂದು ಸ್ಪಷ್ಟವಾದ ರೂಪುರೇಷೆಯನ್ನು ಮಾಡಲಾಗಿದ್ದು, ಸಮಗ್ರ ಅಭಿವೃದ್ಧಿಗೆ ಚಿಂತಿಸಿರುವುದಾಗಿ ವಿಜಯನಾಥ ವಿಠಲ ಶೆಟ್ಟಿ ಹೇಳಿದ್ದಾರೆ.
