Tech Tips: ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾರಾದರು ಸಿಮ್ ಖರೀದಿಸಿದ್ದಾರ?: ಹೇಗೆ ಕಂಡುಹಿಡಿಯುವುದು?

ಆಧಾರ್ ಕಾರ್ಡ್ (Aadhaar Card) ಎಂಬುದು ಪ್ರತಿಯೊಬ್ಬ ಭಾರತೀಯನ ಅತಿ ಅಗತ್ಯವಾದ ಗುರುತು. 2009 ರಲ್ಲಿ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾದ ಆಧಾರ್ ಇಲ್ಲವಾದಲ್ಲಿ ಸರ್ಕಾರದ ಅತ್ಯಮೂಲ್ಯ ಸೌಲಭ್ಯದಿಂದ ವಂಚಿತರಾಗುತ್ತಾರೆ. ಬ್ಯಾಂಕ್ (Bank) ಖಾತೆಯಿಂದ ಹಿಡಿದು ಒಂದು ಸಿಮ್ ಕಾರ್ಡ್ (Sim Card) ಖರೀದಿಸಲು ಕೂಡ ಆಧಾರ್ ಕಡ್ಡಾಯವಾಗಿದೆ. ಇದೇ ಕಾರಣಕ್ಕೆ ನಮಗೆ ಗೊತ್ತಿಲ್ಲದೆ ಅನೇಕ ಕಡೆಗಳಲ್ಲಿ ಆಧಾರ್ ಸಂಖ್ಯೆಗಳನ್ನು ನಮೂದಿಸುತ್ತಲೇ ಇರುತ್ತೇವೆ. ಸರ್ಕಾರದ ಯೋಜನೆಗಳು ಮಾತ್ರವಲ್ಲದೆ ಇತರೆ ಸಣ್ಣಪುಟ್ಟ ಅಗತ್ಯಗಳಿಗೂ ಆಧಾರ್ ಕಾರ್ಡ್ ಜೆರಾಕ್ಸ್ ಅಗತ್ಯವಿದೆ. ಹೀಗಿರುವಾಗ ಆಧಾರ್ ಕಾರ್ಡ್ ದುರ್ಬಳಕೆಯಾಗುವ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ನಕಲಿ ಆಧಾರ್ ಕಾರ್ಡ್‌ ಬಳಸಿ ಸಿಮ್ ಖರೀದಿಸುತ್ತಿರುವ ಪ್ರಕರಣ ಕೂಡ ಹೆಚ್ಚಾಗುತ್ತಿದೆ.

ಕೆಲ ಜನರು ಅಮಾಯಕರ ಆಧಾರ್ ಕಾರ್ಡ್‌ ಬಳಸಿ ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ತೆಗೆದುಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಕಂಡುಬರುತ್ತಿದೆ. ಇದಕ್ಕಾಗಿಯೇ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಯಾವುದಾದರು ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂದು ಪರಿಶೀಲಿಸಲು ಸರ್ಕಾರವು ಆಯ್ಕೆಯನ್ನು ಒದಗಿಸಿದೆ. ಟಾಫ್-ಕಾಪ್ ಹೆಸರಿನ ವೆಬ್‌ಸೈಟ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಮೂಲಕ ಎಷ್ಟು ಸಿಮ್ ಆ್ಯಕ್ಟಿವ್ ಆಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ಈ ಸೌಲಭ್ಯವು ತೆಲಂಗಾಣ, ಆಂಧ್ರಪ್ರದೇಶ, ಕೇರಳ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಮೆಘಾಲಯ, ತ್ರಿಪುರ, ಅರುಣಾಚಲ ಪ್ರದೇಶ ಮತ್ತು ನಾಗಲೆಂಡ್ ನಾಗರಿಕರಿಗೆ ಮಾತ್ರ ಲಭ್ಯವಿದೆ.

Share

Leave a Reply

Your email address will not be published. Required fields are marked *