ಬ್ಯುಸಿನೆಸ್

Gold Price Today: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!
ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,572 ಇದ್ದದ್ದು ಇಂದು ರೂ. 5,565 ಆಗಿದೆ. ಅದರಂತೆ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 55,650 ಆಗಿದ್ದು ಅಪರಂಜಿ ಬಂಗಾರದ (24 ct) ಬೆಲೆ ಪ್ರತಿ ಹತ್ತು ಗ್ರಾಂಗೆ ರೂ. 60,710 ಆಗಿದೆ.ನಿನ್ನೆಗಿಂತ ಇಂದು ಬಂಗಾರ ಇನ್ನಷ್ಟು ಅಗ್ಗವಾಗಿದೆ. ಬಂಗಾರದ ದರದಲ್ಲಿ ಸಾಮಾನ್ಯವಾಗಿ ಏರಿಳಿತ ಉಂಟಾಗುತ್ತಿದ್ದರೂ ದೀರ್ಘಾವಧಿಯಲ್ಲಿ ಅದು ಸಾಕಷ್ಟು ಬೆಲೆಯುಳ್ಳ ವಸ್ತುವಾಗುತ್ತದೆ ಎಂಬ ಅಭಿಪ್ರಾಯ ಬಲಿಷ್ಠವಾಗಿದೆ.
ಅಂತೆಯೇ ವರ್ಷಗಳು ಉರುಳಿದಂತೆ ಬಂಗಾರದ ಮೌಲ್ಯ ವೃದ್ಧಿಸಿದೆಯೇ ಹೊರತು ಎಂದಿಗೂ ಕ್ಷೀಣಿಸಿಲ್ಲ ಎಂಬುದನ್ನು ಕಾಣಬಹುದು. ಅಲ್ಲದೆ ಭಾರತದಂತಹ ದೇಶದಲ್ಲಿ ಚಿನ್ನ ಎಂಬುದು ಹೆಚ್ಚು ಹೆಚ್ಚು ಆಕರ್ಷಣೆ ಹೊಂದಿರುವ ವಸ್ತು. ಕೆಲ ವರದಿಗಳ ಪ್ರಕಾರ ಭಾರತೀಯ ಮಹಿಳೆಯರು ಹೊಂದಿರುವಷ್ಟು ಬಂಗಾರ ಮಿಕ್ಕ ಬೇರಾವ ದೇಶದ ಮಹಿಳೆಯರು ಹೊಂದಿಲ್ಲವಂತೆ..!

Share

Leave a Reply

Your email address will not be published. Required fields are marked *