ಬೆಂಗಳೂರು: ನಾಮಪತ್ರ ಸಲ್ಲಿಕೆ, ಹಿಂಪಡೆಯುವ ಪ್ರಕ್ರಿಯೆ (Nomination) ಎಲ್ಲಾ ಮುಕ್ತಾಯಗೊಂಡಿದ್ದು, ಇಂದಿನಿಂದ ರಿಯಲ್ ಚುನಾವಣೆ ಪ್ರಚಾರ (Election Campaign) ಆರಂಭಗೊಳ್ಳಲಿದೆ. ಇಂದಿನಿಂದ ಎರಡು ರಾಷ್ಟ್ರೀಯ ಮತ್ತು ಒಂದು ಪ್ರಾದೇಶಿಕ ಪಕ್ಷ ಬೃಹತ್ ರೋಡ್ ಶೋಗಳನ್ನು (Road shows) ಆಯೋಜನೆ ಮಾಡುತ್ತಿವೆ. ಮತ್ತೊಂದೆಡೆ ಚುನಾವಣಾ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಲಿಂಗಾಯತ ಸಿಎಂ (Lingayat CM) ಕಾದಾಟ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ.