`ಸಪ್ತ ಸಂಧ್ಯಾ – ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ’

ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ಪ್ರಸ್ತುತಿ

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ನವೆಂಬರ್ ೧೪ ರಿಂದ೨೦ ರವರೆಗೆ `ಸಹಕಾರ ಸಪ್ತಾಹ ಸಂಭ್ರಮ’ ಹಮ್ಮಿಕೊಳ್ಳಲಾಗಿದ್ದು, ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ `ಸಪ್ತ ಸಂಧ್ಯಾ – ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


೧೪ರಂದು ಸಾಯಂಕಾಲ ೬.೦೦ಗಂಟೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸಪ್ತಾಹ ಉದ್ಘಾಟಿಸುವರು. ಆಳ್ವಾಸ್ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಡಾ. ಎಚ್. ಎನ್. ರಮೇಶ್, ಕೊರ್ಪುಸ್ ಕ್ರಿಸ್ತಿ ಚರ್ಚ್ ಧರ್ಮಗುರು ಒನಿಲ್ ಡಿಸೋಜ ಸಹಿತ ಗಣ್ಯರು ಭಾಗವಹಿಸುವರು. ಸೊಸೈಟಿಯ ನಿರ್ದೇಶಕ ಎಂ. ಜಾರ್ಜ್ ಮೋನಿಸ್ `ಸಹಕಾರ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದರು.
ಸಪ್ತಾಹದ ಪ್ರತಿದಿನ ಸಾಯಂಕಾಲ ೬ ಗಂಟೆಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ಆ ಬಳಿಕ ವಿವಿಧ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನ.೧೫ರಂದು ಸಹಕಾರ-ಪರಿಸರ, ಕೃಷಿ, ಪಶುಸಂಗೋಪನೆ ಉಪನ್ಯಾಸ ಹಾಗೈ ಗ್ರಾಮೀಣ ಅಭಿವೃದ್ಧಿ ದಿನಾಚರಣೆ, ೧೬ರಂದು ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತಿಯಲ್ಲಿ, ಯುವ ಉದ್ಯಮಿ ಎಂ. ಅಭಿಜಿತ್ ಅವರಿಗೆ `ಸಮಗ್ರ ಸಾಧಕ ಪ್ರಶಸ್ತಿ’ ಪ್ರದಾನ ನಡೆಯಲಿದೆ.

ನ.೧೭ರಂದು ಸಹಕಾರ ಮತ್ತು ಮಾನವೀಯ ಮೌಲ್ಯಗಳು ವಿಚಾರದ ಕುರಿತು ಉಪನ್ಯಾಸ, ನ.೧೮ರಂದು ಸಹಕಾರ-ಉಚಿತ ಕಾನೂನು ಸೇವೆ ಉಪನ್ಯಾಸ, ನ.೧೯ರಂದು ಸಹಕಾರ ಮತ್ತು ರಾಷ್ಟಿçÃಯ ಚಿಂತನೆ ಹಾಗೂ ನ.೨೦ರಂದು ಸಹಕಾರ-ಯುವಜನ ಸೇವೆ ಕುರಿತು ಉಪನ್ಯಾಸ ನಡೆಯಲಿದೆ. ನ೧೬ರಂದು ಬೆಳಗ್ಗೆ ೧೦ಗಂಟೆಯಿoದ ಉಚಿತ ವೈದ್ಯಕೀಯ ತಪಾಸಣೆ ನಡೆಯಲಿದೆ ಎಂದರು.

 

ಸಾಧಕರಿಗೆ ಗೌರವ: ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಮಾತನಾಡಿ, ಸಪ್ತಾಹದ ಪ್ರತಿದಿನ ವಿವಿಧ ಕ್ಷೇತ್ರಗಳ ಸಾಧಕರು, ಸಂಘ ಸಂಸ್ಥೆಗಳನ್ನು ಗೌರವಿಸಲಾಗುವುದು. ಈ ಬಾರಿ ಸಹಕಾರ ಸಪ್ತಾಹದಲ್ಲಿ ೩೦ ಅಧಿಕ ಮಂದಿ ಹಾಗೂ ಸಂಘ ಸಂಸ್ಥೆಗಳನ್ನು ಗೌರವಿಸಲಾಗುವುದು. ವಿಶೇಷವಾಗಿ ಮೂಡುಬಿದಿರೆಯ ಹುಲಿವೇಷ ತಂಡಗಳನ್ನು ಗುರುತಿಸಿ ಗೌರವಿಸಲಿದ್ದೇವೆ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ದೇಣಿಗೆಗಳನ್ನು ನೀಡಲಿದ್ದೇವೆ. ನಿವೃತ್ತಿಗೊಳ್ಳಲಿರುವ ಸಿಇಒ ಕೆ.ರಘುವೀರ್ ಕಾಮತ್ ಹಾಗೂ ಸಿಬ್ಬಂದಿ ಶೇಖರ್ ಅವರನ್ನು ಸನ್ಮಾನಿಸಲಾಗುವುದು ಎಂದು ವಿವರ ತಿಳಿಸಿದರು.

ಸೊಸೈಟಿಯ ಉಪಾಧ್ಯಕ್ಷ ಎಂ.ಗಣೇಶ್ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಘುವೀರ್ ಕಾಮತ್, ನಿರ್ದೇಶಕರಾದ ಕೆ.ಅಭಯಚಂದ್ರ ಜೈನ್, ಎಂ.ಜಾರ್ಜ್ ಮೋನಿಸ್, ಮನೋಜ್ ಕುಮಾರ್ ಶೆಟ್ಟಿ, ಎಂ.ಪದ್ಮನಾಭ, ಸಿ.ಎಚ್.ಗಫೂರ್, ಎಂ.ಪಿ ಅಶೋಕ್ ಕಾಮತ್, ಜ್ಞಾನೇಶ್ವರ ಕಾಳಿಂಗ ಪೈ, ದಯಾನಂದ ನಾಯ್ಕ್, ಪ್ರೇಮಾ ಎಸ್.ಸಾಲ್ಯಾನ್, ಅನಿತಾ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

Share

Leave a Reply

Your email address will not be published. Required fields are marked *