ಮೂಡುಬಿದಿರೆ: ದೇವರ ಸಾಕ್ಷಾತ್ಕಾರ ಆದ ಅನುಭವ ಈ ಕ್ಷೇತ್ರದಲ್ಲಿದೆ. ದೇವರು ಅವ್ಯಕ್ತವಾಗಿ ಗೋಚರಿಸುತ್ತಾನೆ ಎಂಬುದಕ್ಕೆ ಈ ಗುಹಾ ಪ್ರವೇಶ ಸಾಕ್ಷಿ. ಹಿಂದೂ ಸಮಾಜ ಹೆಚ್ಚಿನ ರೀತಿಯಲ್ಲಿ ಪ್ರಭಲತೆ, ಪ್ರಖರತೆಯಿಂದ ಬೆಳಗುವಂತಾಗಲಿ ಎಂದು ಎಡನೀರು ಸಂಸ್ಥಾನದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಅಭಿಪ್ರಾಯಿಸಿದರು.

ನೆಲ್ಲಿತೀರ್ಥ ಗುಹಾ ಪ್ರವೇಶದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಮೊಟ್ಟಮೊದಲ ಬಾರಿಗೆ ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದೇನೆ. ಇದೊಂದು ಹೇಳಲು ಅಸಾಧ್ಯವಾದ ಅನುಭವ ಕಟ್ಟಿಕೊಟ್ಟಿದೆ. ಅವ್ಯಕ್ತ ಅನುಭವ ಈ ಗುಹಾ ಪ್ರವೇಶದಲ್ಲಾಗಿದೆ. ಆನಂದವಾಗಿದೆ ಎಂದರು.

ಈ ಸಂದರ್ಭದಲ್ಲಿ ಭ್ರಹ್ಮಶ್ರೀ ವೆಂಕಟೇಶ ತಂತ್ರಿಗಳು, ಕಟೀಲು ಶ್ರೀ ಲಕ್ಷ್ಮಿನಾರಾಯಣ ಆಸ್ರಣ್ಣರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಯುಗಪುರುಷದ ಭುವನಾಭಿರಾಮ ಉಡುಪ, ಶ್ರೀಪತಿ ಭಟ್, ರಾಜಗೋಪಾಲ್ ಆಚಾರ್ಯ ಕೋಟೇಶ್ವರ, ಎನ್.ವಿ.ವೆಂಕಟರಾಜ್ ಭಟ್, ದೀಪ್ ಕಿರಣ್, ಪ್ರಸನ್ನ ಭಟ್, ವಸಂತ ಭಟ್, ಗಣಪತಿ ಭಟ್, ಎನ್.ವಿ.ಜಿ.ಕೆ. ಭಟ್, ಎನ್.ವಿ.ರಮೇಶ್ ಭಟ್, ವಾದೀಶ್ ಭಟ್, ಆನಂದ ಕಾವ, ಕೃಷ್ಣಪ್ಪ ಪೂಜಾರಿ, ಸುಂದರ ಪೂಜಾರಿ ಮೊದಲಾದವರಿದ್ದರು.