ಡಿಸೆಂಬರ್ ೧೦ರಿಂದ ೧೫: ಅದ್ಭುತ ಸಾಂಸ್ಕೃತಿಕ ಲೋಕದ ಅನಾವರಣ
ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ತಾಲೂಕು ಮೂಡುಬಿದಿರೆಯಲ್ಲಿ ಅತ್ಯದ್ಭುತ ಸಾಂಸ್ಕೃತಿಕ ರಸದೌತಣ ನೀಡಲಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ `ಆಳ್ವಾಸ್ ವಿರಾಸತ್ - ರಾಷ್ಟಿçÃಯ ಸಾಂಸ್ಕೃತಿಕೋತ್ಸವ'ದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ಅನಾವರಣಗೊಳ್ಳಲಿದೆ.
ಆಳ್ವಾಸ್ ವಿರಾಸತ್-೨೦೨೪ ಇದೇ ಡಿಸೆಂಬರ್ ೧೦, ೨೦೨೪ನೇ ಮಂಗಳವಾರದAದು ಪ್ರಾರಂಭವಾಗಿ ಡಿಸೆಂಬರ್ ೧೫, ೨೦೨೪ನೇ ಭಾನುವಾರದಂದು ಮುಕ್ತಾಯಗೊಳ್ಳಲಿದೆ. ಈ ವರ್ಷ ೩೦ನೇ ಆವೃತ್ತಿಯ ಆಳ್ವಾಸ್ ವಿರಾಸತ್ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ `ಆಳ್ವಾಸ್ ವಿರಾಸತ್’ ಈ ಬಾರಿ ಅತ್ಯಂತ ವೈಭವದಿಂದ ವಿಭಿನ್ನವಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ಅಪೂರ್ವ ಮತ್ತು ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ವ್ಯವಸ್ಥೆಯಾಗಿದೆ.
ಕಲಾಸಕ್ತರಿಗೆ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಕಲಾ ರಸದೌತಣವನ್ನು ವಿರಾಸತ್ ವೈಭವದ ಮೂಲಕ ಉಣಬಡಿಸಲಾಗುತ್ತದೆ. ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಸೇರಿ ಒಟ್ಟು ೬ ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ವೈಭವೋಪೇತವಾಗಿ ಸಂಪೂರ್ಣ ಉಚಿತವಾಗಿ ನಡೆಯಲಿದೆ. ಮೊದಲ ೫ ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಹಾರೋತ್ಸವ, ಕರಕುಶಲ ವಸ್ತುಗಳ ಪ್ರದರ್ಶನಗಳಿಗೆ ಅವಕಾಶವಿದ್ದು ಕೊನೆಯ ದಿನ ಭಾನುವಾರವನ್ನು ಕೇವಲ ವಸ್ತು ಪ್ರದರ್ಶನಗಳಿಗಾಗಿಯೇ ಮೀಸಲಿಡಲಾಗಿದೆ. ಈ ಬಾರಿಯೂ ಹತ್ತು ಹಲವು ವಿಶೇಷತೆಗಳು ವಿರಾಸತ್ ಮೂಲಕ ಅನಾವರಣಗೊಳ್ಳಲಿವೆ. ಅಪಾರ ಸಂಖ್ಯೆಯ ಹೂಗಿಡಗಳು ವಿರಾಸತ್ ಆವರಣಕ್ಕೆ ಹೊಸ ಮೆರುಗು ನೀಡಲಿವೆ. ರಾಜ್ಯದ ಬೇರೆಲ್ಲೂ ಕಾಣಸಿಗದಂತಹ ಅಸಂಖ್ಯ, ವೈವಿಧ್ಯಮಯ ಹೂವಿನ ಅಲಂಕಾರ ಆಳ್ವಾಸ್ ವಿರಾಸತ್‌ನ ಮತ್ತೊಂದು ವಿಶೇಷತೆ!. ರಥೋತ್ಸವ, ರಥಾರಥಿಗಳು ವಿರಾಸತ್ ವೈಭವಕ್ಕೆ ಮತ್ತಷ್ಟು ಮೆರುಗು ನೀಡಲಿವೆ. `ಗಂಗಾರತಿ’ಯನ್ನೇ ಹೋಲುವ `ರಥಾರತಿ’ ಡಾ.ಎಂ.ಮೋಹನ ಆಳ್ವರ ವಿಶೇಷ ಪರಿಕಲ್ಪನೆ.
೩೦ನೇ ಆವೃತ್ತಿ!
ಆಳ್ವಾಸ್ ವಿರಾಸತ್‌ನ ೩೦ನೇ ಆವೃತ್ತಿ ಈ ಬಾರಿ ಅನಾವರಣಗೊಳ್ಳಲಿದೆ. ಈ ಕಾರಣಕ್ಕಾಗಿಯೇ ಈ ಬಾರಿ ವಿಶೇಷ ತಯಾರಿಗಳು ನಡೆಯುತ್ತಿವೆ. ಬೆಂಗಳೂರಿನ ಲಾಲ್ ಬಾಗ್, ಮೈಸೂರು ದಸರಾ ಮೊದಲಾದ ಕಡೆಗಳಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಗಳನ್ನೂ ಮೀರಿಸುವ ರೀತಿಯಲ್ಲಿ ಕರಾವಳಿಯಲ್ಲಿ ಅತ್ಯದ್ಭುತವಾದ ಫಲಪುಷ್ಪಗಳ ಪ್ರದರ್ಶನ ನಡೆಯಲಿದೆ. ದೇಶ ವಿದೇಶಗಳ ಸಹಸ್ರಾರು ವೈವಿಧ್ಯಮಯ ಪುಷ್ಪರಾಶಿಗಳು ಪ್ರದರ್ಶನದ ಮೆರುಗು ಹೆಚ್ಚಿಸಲಿವೆ. ವಿವಿಧ ಆಕೃತಿಗಳು, ಹೊಸತನದ ಜೋಡಣೆ ಇವೆಲ್ಲವೂ ಪ್ರೇಕ್ಷಕರನ್ನು ಕೈಬೀಸಿ ಕರೆಯುವುದರಲ್ಲಿ ಸಂದೇಹವೇ ಇಲ್ಲ. ಮೂಡುಬಿದಿರೆಯ ವಿದ್ಯಾಗಿರಿಯ ಆವರಣ ವಿರಾಸತ್ ವೈಭವಕ್ಕಾಗಿ ಸಿದ್ಧಗೊಳ್ಳುತ್ತಿದೆ.
ಹಲವು ವಿಶೇಷತೆಗಳು!
“ಹಿಂದಿನ0ತಲ್ಲ ಈ ಬಾರಿಯ ವಿರಾಸತ್!” ಇದು ವಿರಾಸತ್ ಸಂಘಟಕ, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಮಾತು!. ಮಾತನಾಡಿದ ಮೋಹನ ಆಳ್ವರು, ಈ ಬಾರಿ ಹಲವು ವಿಶೇಷತೆಗಳೊಂದಿಗೆ ವಿರಾಸತ್ ಅನಾವರಣಗೊಳ್ಳಲಿದೆ ಎಂದಿದ್ದಾರೆ. ವಿದ್ಯಾಗಿರಿಯ ಆವರಣದಲ್ಲಿ ಇಂಚಿ0ಚೂ ಜೀವಕಳೆ ತುಂಬುವ0ತೆ ಸಿಂಗರಿಸಲಾಗುತ್ತದೆ. ಸಾಂಸ್ಕೃತಿಕ ಲೋಕದ ದಿಗ್ಗಜರಿಂದ ಕಾರ್ಯಕ್ರಮ, ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇಷ್ಟಪಡುವ, ಆಸಕ್ತಿಯಿಂದ ಪಾಲ್ಗೊಳ್ಳುವಂತಹ ರೀತಿಯಲ್ಲಿ ಒಟ್ಟಾರೆ ಕಾರ್ಯಕ್ರಮ ಮೂಡಿಬರಲಿದೆ ಎಂದಿದ್ದಾರೆ.