ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ

ಮೂಡುಬಿದಿರೆ: ಶಿವರಾಮ ಕಾರಂತರದ್ದು ಬಹು ವಿರಳ ವ್ಯಕ್ತಿತ್ವ. ಅನ್ನಿಸಿದ್ದನ್ನುಮುಲಾಜಿಲ್ಲದೆ ನೇರವಾಗಿ ಹೇಳುತ್ತಾರೆ. ಪ್ರಭುತ್ವಕ್ಕೆ ತಲೆಬಾಗದೆ, ಕೃತಕ ಗಾಂಭೀರ್ಯದಿ0ದ ದೂರ ಉಳಿದವರು ಕಾರಂತರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಿಸಿದರು.
೨೦೨೩ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಕಾರ್ಯಕ್ರಮಕ್ಕೆ ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು.

ವಿಮರ್ಶೆ ಮಾಡಿ ಜೀವನ ಮಾಡು ಎಂಬ ವಿಚಾರವನ್ನು ಕಾರಂತರು ಬಿಟ್ಟು ಹೋಗಿದ್ದಾರೆ. ವಿಮರ್ಶೆಯ ಬಳುವಳಿ ನಮಗೆ ಕಾರಂತರು ನೀಡಿದ್ದಾರೆ. ಕಾರಂತರನ್ನು ಜೀರ್ಣ ಮಾಡಿಕೊಳ್ಳುವುದು ಬಹಳ ಕಷ್ಟ ಎಂದು ವ್ಯಾಖ್ಯಾನಿಸಿದರು.

ನಾಡು ಕಂಡ ಚಿಂತನಾಶೀಲ ಲೇಖಕರಾಗಿದ್ದ ಡಾಕ್ಟರ್ ಶಿವರಾಮ ಕಾರಂತರ ಹೆಸರಿನಲ್ಲಿ “ಶಿವರಾಮ ಕಾರಂತ ಪ್ರತಿಷ್ಠಾನ”ವು ಪ್ರತಿವರ್ಷವೂ ನೀಡುತ್ತಾ ಬಂದಿರುವ “ಶಿವರಾಮ ಕಾರಂತ ಪ್ರಶಸ್ತಿ”ಗಳನ್ನು ಖ್ಯಾತ ಕವಿಗಳು ಬರಹಗಾರರು ಆಗಿರುವ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು ಅವರಿಗೆ, ಖ್ಯಾತ ಜಾನಪದ ವಿದ್ವಾಂಸರು, ಸೃಜನಶೀಲ ಲೇಖಕರು ಆಗಿರುವ ಮೈಸೂರಿನ ಪ್ರೊಫೆಸರ್. ಕೃಷ್ಣಮೂರ್ತಿ ಹನೂರ ಇವರಿಗೆ, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿದ ಉಡುಪಿಯ ಕೆ.ಪಿ. ರಾವ್ ಅವರಿಗೆ ಮತ್ತು ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅರ್ಪಣಾ ಭಾವದಿಂದ ೭೫ ವರ್ಷಗಳ ಕಾಲ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಹೆಗ್ಗೋಡಿನ ನಿನಾಸಂ ಸಂಸ್ಥೆಗೆ “ಶಿವರಾಮ ಕಾರಂತ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಕಳೆದ ಮೂರು ದಶಕಗಳಿಂದ ಕೃತಿಗಳನ್ನು ಆಧರಿಸಿ ೧೦,೦೦೦ ರೂಪಾಯಿ ಗೌರವ ಸಂಭಾವನೆಯೊ0ದಿಗೆ ನೀಡುತ್ತಾ ಬಂದಿರುವ “ಶಿವರಾಮ ಕಾರಂತ ಪುರಸ್ಕಾರ’ವನ್ನು ಆತ್ಮಕಥನ ಹಾಡಾಗಿ ಹರಿದಾಳೆ ಕೃತಿಗಾಗಿ ಹೆಚ್ .ಆರ್. ಲೀಲಾವತಿ , ಅಂಬೇಡ್ಕರ್ ಮತ್ತು..ಕೃತಿಗಾಗಿ ಪ್ರೊಫೆಸರ್.ಎಚ್.ಟಿ.ಪೋತೆ , ವಿನೂತನ ಕಥನ ಕಾರಣ ಕೃತಿಗಾಗಿ ಡಾ. ಬಿ.ಜನಾರ್ದನ ಭಟ್, ಮಾರ್ಗಾನ್ವೇಷಣೆ ಕೃತಿಗಾಗಿ ಡಾ.ನಿತ್ಯಾನಂದ ಬಿ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು.
ಕೋಶಾಧಿಕಾರಿ ಕೆ ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಕೆ ಶ್ರೀಪತಿ ಭಟ್, ಡಾಕ್ಟರ್ ಎಂ ಮೋಹನ್ ಆಳ್ವ, ಡಾ. ಧನಂಜಯ ಕುಂಬ್ಳೆ, ವೇಣುಗೋಪಾಲ್ ಶೆಟ್ಟಿ ಉಪಸ್ಥಿತಿದ್ದರು.
ಆಳ್ವಾಸ್ ಪ್ರತಿಷ್ಠಾನದ ಸಾಂಸ್ಕೃತಿಕ ತಂಡದಿAದ ಪ್ರಾರ್ಥನೆ ನಡೆಯಿತು.

Share

Leave a Reply

Your email address will not be published. Required fields are marked *