ಮೂಡುಬಿದಿರೆ: ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಆರ್ಬ್ ಎನರ್ಜಿ ಸಂಸ್ಥೆಯು ೨೫೦ ಕಿಲೋವ್ಯಾಟ್ ಮೇಲ್ಫಾವಣಿ ಸೋಲಾರ್ ಸಿಸ್ಟಮ್ ಕೆಲಸವನ್ನು ಪೂರ್ಣಗೊಳಿಸಿದ್ದು, ಶಾಸಕ ಉಮಾನಾಥ ಎ ಕೋಟ್ಯಾನ್ ನೂತನ ಯೋಜನೆಯನ್ನು ಲೋಕಾರ್ಪಣೆ ಮಾಡಿದರು.
ಮೂಡಬಿದ್ರಿಯಲ್ಲಿರುವ ಎಸ್.ಕೆ.ಎಫ್ ಎಲಿಕ್ಸರ್ ಸಂಸ್ಥೆಯು ತನ್ನ ಮೇಲ್ಚಾವಣಿ ಸೋಲಾರ್ ಸಿಸ್ಟಮ್‌ನಿಂದ ವರ್ಷಕ್ಕೆ ರೂ. ೨೫ ಲಕ್ಷಕ್ಕಿಂತ ಹೆಚ್ಚು ಉಳಿಸಲಿದ್ದು, ಕೇವಲ ೩ ವರ್ಷ ೨ ತಿಂಗಳುಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಲಿದೆ. ತನ್ಮೂಲಕ ವಿದ್ಯುತ್ ಸ್ವಾವಲಂಬನೆಯನ್ನು ಮಾಡುತ್ತಿದೆ ಎಂದು ಶಾಸಕರು ಪ್ರಶಂಸಿದರು. ಪ್ರತಿಯೊಂದು ಕ್ಷೇತ್ರದಲ್ಲೂ ವಿದ್ಯುತ್ ಅತ್ಯವಶ್ಯಕವಾಗಿದ್ದು, ಜನತೆ ವಿದ್ಯುತ್ ಸ್ವಾವಲಂಬನೆಗೆ ಕೈಜೋಡಿಸುವ ಅನಿವಾರ್ಯತೆ ಇಂದಿದೆ ಎಂದು ಶಾಸಕ ಹೇಳಿದರು.
“ಎಸ್.ಕೆ.ಎಫ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್ ೨೫೦ ಕಿಲೋವ್ಯಾಟ್ ಸಾಮರ್ಥ್ಯದ ಮೇಲಾವಣಿ ಸೋಲಾರ್ ಅನ್ನು ವಿನ್ಯಾಸಗೊಳಿಸಿ, ನಿರ್ಮಸಿ, ಅಳವಡಿಸಿಕೊಳ್ಳಲು ಆರ್ಬ್ ಎನರ್ಜಿಯನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಬಹಳ ಸಂತಸ ತಂದಿದೆ. ಆರ್ಬ್ ಎನರ್ಜಿ ಕಂಪೆನಿಯ ಮೇಲ್ಟಾವಣಿ ಸೋಲಾರ್ ಈಗ ಎಸ್.ಕೆ.ಎಫ್ ಎಲಿಕ್ಸರ್ ಸಂಸ್ಥೆಯ ದೈನಂದಿನ ವಿದ್ಯುತ್ ಅಗತ್ಯಗಳಲ್ಲಿ ಸರಿಸುಮಾರು ೬೦% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ಸ್ವಚ್ಛ, ಹಸಿರು ಸೌರಶಕ್ತಿಗೆ ಬದಲಾಯಿಸಿಕೊಳ್ಳುವ ಮೂಲಕ ಇತರ ಉದ್ಯಮಗಳಿಗೆ ಮಾದರಿಯಾಗಿದೆ” ಎಂದು ಆರ್ಬ್ ಎನರ್ಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಡೆಮಿಯನ್ ಮಿಲ್ಲರ್ ರವರು ಹೇಳಿದರು.
ಸಾಮಾನ್ಯವಾಗಿ ಮೇಲ್ಪಾವಣಿ ಸೋಲಾರ್‌ನಿಂದ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ೩ ರಿಂದ ೪ ವರ್ಷಗಳಲ್ಲಿ ಅವರು ಹೂಡಿಕೆ ಮಾಡಿರುವ ಹಣವು ಮರುಪಾವತಿಯಾಗುತ್ತದೆ. ಎಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಮೇಲ್ಪಾವಣಿ ಸೋಲಾರ್ ಹೆಚ್ಚು ಕೈಗೆಟುಕುವಂತೆ ಮಾಡಲು, ಆರ್ಬ್ ತನ್ನದೇ ಆದ ಆಂತರಿಕ, ಮೇಲಾಧಾರ-ಮುಕ್ತ ಸೋಲಾರ್ ಫೈನಾನ್ಸ್ ಅನ್ನು ೫ ವರ್ಷಗಳ ಅವಧಿಯವರೆಗೆ ನೀಡುತ್ತದೆ ಎಂದು ಹೇಳಿದ್ದಾರೆ.
ಆರ್ಬ್ ಮೇಲ್ಪಾವಣಿಯ ಸೋಲಾರ್ ಲಂಬಾತ್ಮಕವಾಗಿ ಸಂಯೋಜಿತ ಪೂರೈಕೆದಾರ ಸಂಸ್ಥೆಯಾಗಿದ್ದು, ಇದು ತನ್ನದೇ ಆದ ಸೋಲಾರ್ ಫಲಕಗಳನ್ನು ತಯಾರಿಸುತ್ತದೆ. ಅಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ತನ್ನದೇ ಆದ ಆಂತರಿಕ ಹಣಕಾಸನ್ನು ಸಹ ಒದಗಿಸುತ್ತದೆ. ಹೀಗಾಗಿ ಇದು ಭಾರತದ ಮೇಲ್ಟಾವಣಿ ಸೋಲಾರ್ ಉದ್ಯಮದಲ್ಲಿ ಸಂಪೂರ್ಣವಾಗಿ ಅನನ್ಯ ಕೊಡುಗೆಯಾಗಿದೆ ಎಂದು ವಿಶ್ಲೇಷಿಸಿದರು.
ಚಾರ್ಟಡ್ ಅಕೌಂಟೆ0ಟ್ ಎಸ್ ಎಸ್ ನಾಯಕ್, ಕರ್ನಾಟಕ ಬ್ಯಾಂಕ್ ಡಿಜಿಎಂ ಹಾರ್ಲೆ ವಸಂತ, ಬ್ಯಾಂಕ್ ಆಫ್ ಬರೋಡದ ಎಜಿಎಂ ಮಧುಸೂದನ್, ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್ ವೇದಿಕೆಯಲ್ಲಿದ್ದರು. ಎಸ್‌ಕೆಎಫ್ ಸಿಇಒ ಶ್ರೀನಿಧಿ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ವಿನೋದ್ ಪ್ರಾರ್ಥಿಸಿದಿರು. ತೇಜಸ್ ಆರ್ ಆಚಾರ್ ಸ್ವಾಗತಿಸಿದರು. ಪ್ರಜ್ವಲ್ ಆರ್ ಆಚಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೀನಿಯರ್ ಡೈರೆಕ್ಟರ್ ದೇವರಾಜ್ ವಂದಿಸಿದರು.