ಮೂಡುಬಿದಿರೆ: ಸಿಬಿಎಸ್‌ಸಿ ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ನಾಲ್ಕನೇ ವರ್ಷ ಆಳ್ವಾಸ್ ಶಾಲೆಯು ೧೦೦% ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ ೧೭ ವಿದ್ಯಾರ್ಥಿಗಳು ೯೫%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಶಾಲೆಯಿಂದ ೯೫ ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ. ಶ್ರವಣ್ ಬೆಳಿರಾಯ ೯೫ಶೇಕಡಾ ಅಂಕ ಪಡೆದಿದ್ದಾನೆ. ಮೂಡುಬಿದಿರೆ ಕೀರ್ತಿನಗರದಲ್ಲಿರುವ ಶಿಕ್ಷಕಿ ಅರುಣಾ, ಹಾಗೂ ಶ್ರೀನಿವಾಸ್ ಬೆಳಿರಾಯ ಅವರ ಸುಪುತ್ರ.