ಆಳ್ವಾಸ್ ಶಾಲೆಯ ೫೧ ವಿದ್ಯಾರ್ಥಿಗಳು ೬೦೦ಕ್ಕೂ ಹೆಚ್ಚು ಅಂಕದ ವಿಶಿಷ್ಟ ಸಾಧನೆ

ವಿದ್ಯಾಗಿರಿ: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಪ್ರೌಢಶಾಲೆಯು ೧೦೦ ಶೇಕಡಾ ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ ೫೧ ವಿದ್ಯಾರ್ಥಿಗಳು ೬೦೦ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಇಶಾನ್ (೬೧೯), ಮನೀಷಾ ಎನ್ (೬೧೮), ಮಾನ್ಯ ಎನ್ ಪೂಜಾರಿ (೬೧೭), ಋತುರಾಜ್ ರಾಮಕೃಷ್ಣ (೬೧೭), ಮುರುಗೇಶ್ ಬಿರಾದರ್ (೬೧೬), ಗೋಪಾಲ್ ಕೆಂಚಪ್ಪ(೬೧೭), ಮಲ್ಲಿಕಾರ್ಜುನ ರಾಮಲಿಂಗಯ್ಯ (೬೧೪), ಅನ್ನಪೂರ್ಣ ಕಾಮತ್ (೬೧೨), ಪ್ರಣೀತಾ (೬೧೨), ಭೂಮಿಕಾ (೬೧೨), ಗೋಪಾಲ ಪರಮಾನಂದ (೬೧೧),

ಲಕ್ಷ್ಮಿ ಹನಮಂತ ( ೬೧೧), ಅರ್ಪಿತಾ (೬೧೦), ಪ್ರಜ್ವಲ್ ಗಣಪತಿ(೬೧೦), ಸುಪ್ರೀಯಾ ಮಹಾಂತೇಶ್ (೬೧೦) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ.
೧೫ ವಿದ್ಯಾರ್ಥಿಗಳು ೬೧೦ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ೯೨ ವಿದ್ಯಾರ್ಥಿಗಳು ಶೇ೯೫ಕ್ಕೂ ಅಧಿಕ, ೧೮೯ ವಿದ್ಯಾರ್ಥಿಗಳು ಶೇ೯೦ಕ್ಕೂ ಅಧಿಕ, ೨೭೭ ವಿದ್ಯಾರ್ಥಿಗಳು ಶೇ ೮೫ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದರು. 
ಇಬ್ಬರು ವಿದ್ಯಾರ್ಥಿಗಳು ನಾಲ್ಕು ವಿಷಯಗಳಲ್ಲಿ ಶೇ೧೦೦ ಪಡೆದಿದ್ದು, ೫ ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ ಶೇ೧೦೦ ಅಂಕ ಪಡೆದಿದ್ದಾರೆ. ೨೫ ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ, ೧೦೧ ವಿದ್ಯಾರ್ಥಿಗಳು ಒಂದು ವಿಷಯಗಳಲ್ಲಿ ಶೇ ೧೦೦ ಅಂಕ ಪಡೆದಿದ್ದಾರೆ. 
ಪ್ರಥಮ ಭಾಷೆ ಕನ್ನಡದಲ್ಲಿ ೧೨, ದ್ವಿತೀಯ ಭಾಷೆ ಕನ್ನಡದಲ್ಲಿ ೧೭, ತೃತೀಯ ಭಾಷೆ ಕನ್ನಡದಲ್ಲಿ ೧೫, ದ್ವಿತೀಯ ಭಾಷೆ ಇಂಗ್ಲಿಷ್ ೪, ಪ್ರಥಮ ಭಾಷೆ ಸಂಸ್ಕೃತ ೧೮, ತೃತೀಯ ಭಾಷೆ ಹಿಂದಿಯಲ್ಲಿ ೨೯, ತೃತೀಯ ಭಾಷೆ ಸಂಸ್ಕೃತದಲ್ಲಿ ೧೧, ಗಣಿತದಲ್ಲಿ ೧, ಸಮಾಜ ವಿಜ್ಞಾನದಲ್ಲಿ ೫ ವಿದ್ಯಾರ್ಥಿಗಳು ಶೇ ೧೦೦ ಅಂಕ ಪಡೆದಿದ್ದಾರೆ. 
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ ಸಹಾಯ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಇದ್ದರು.
Share

Leave a Reply

Your email address will not be published. Required fields are marked *