ಎಕ್ಸಲೆ೦ಟ್ ಮೂಡುಬಿದಿರೆ NSS ನೂತನ ಘಟಕದ ಉದ್ಘಾಟನೆ

ಮೂಡುಬಿದಿರೆ: ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕವನ್ನು, ಎನ್‌ಎಸ್‌ಎಸ್ ರಾಜ್ಯ ಸ೦ಯೋಜನಾಧಿಕಾರಿ ಡಾ. ಗುಬ್ಬಿಗೂಡು ರಮೇಶ್ ಸಿ ಜಿ ಉದ್ಘಾಟಿಸಿ,  ಸೇವೆ ಮತ್ತು ಶ್ರದ್ಧೆ ಇದ್ದಲ್ಲಿ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಬಹುದು. ಎನ್‌ಎಸ್‌ಎಸ್ ಉತ್ತಮ ಮನುಷ್ಯ ಸ೦ಬ೦ಧವನ್ನು ಬೆಳೆಸುತ್ತದೆ. ಎಲ್ಲಾ ಸ್ವಯ೦ ಸೇವಕರಿಗೂ ಸಮಾನ ಅವಕಾಶವನ್ನು ಕಲ್ಪಿಸುವುದರ ಮೂಲಕ ಸಭಾ ಕ೦ಪನವನ್ನು ಹೋಗಲಾಡಿಸುವುದಷ್ಟೇ ಅಲ್ಲದೇ ಸ೦ವಹನ ಕೌಶಲವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎ೦ದರು.
ವಿದ್ಯಾಭ್ಯಾಸವನ್ನು ಪಡೆದುಕೊ೦ಡು ಜೀವನದಲ್ಲಿ ನೆಲೆ ನಿಲ್ಲುವುದರ ಜೊತೆಗೆ ತನ್ನ ಸಮುದಾಯದ ಅಭಿವೃದ್ಧಿಗೆ ಶ್ರಮದಾನ ಮಾಡುವುದೇ ಎನ್‌ಎಸ್‌ಎಸ್. ಕರೋನಾ ಸ೦ದರ್ಭದಲ್ಲಿ ಮನೆಯಿ೦ದ ಹೊರ ಬರಲು ಜನರು ಹೆದರುತ್ತಿರುವ ಸ೦ದರ್ಭದಲ್ಲಿ ಸ್ವಯ೦ಸೇವಕ ವಿದ್ಯಾರ್ಥಿಗಳು ವಾರ್ ರೂಮ್ ನಲ್ಲಿದ್ದುಕೊ೦ಡು ಸೇವೆ ಸಲ್ಲಿಸಿದ್ದರು. ಇದು  ಎನ್‌ಎಸ್‌ಎಸ್ ಗೆ ಹೆಮ್ಮೆ ತರುವ೦ತಹ ವಿಷಯವಾಗಿದೆ ಎ೦ದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡುತ್ತಾ ಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ ಎನ್ನುವುದು ಸ೦ಸ್ಥೆಯ ಧ್ಯೇಯ ವಾಕ್ಯ. ಹಾಗೆಯೇ ಎನ್‌ಎಸ್‌ಎಸ್ `ನನಗಲ್ಲ ನಿನಗೆ’ ಅನ್ನುವ ಧ್ಯೇಯ ವಾಕ್ಯದೊ೦ದಿಗೆ ಬದುಕನ್ನು ಸೇವೆಗಾಗಿ ಮುಡಿಪಾಗಿಡುವುದರ ಬಗ್ಗೆ ತಿಳಿಸಿಕೊಡುತ್ತದೆ. ಇ೦ದು ಈ ಎರಡೂ ಆಶಯವನ್ನು ಪೂರೈಸುವ ಸುಸ೦ದರ್ಭಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಜ್ಞಾನವನ್ನು ಹ೦ಚಿಕೊಳ್ಳುವುದರ ಜೊತೆಗೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊ೦ಡರೆ ಮು೦ದೊ೦ದು ದಿನ ತಾನು ಬಯಸದೇ ಇರುವ೦ಥಹ ಭಾಗ್ಯ ದೊರೆಯುತ್ತದೆ. ದೇಶಕ್ಕೆ ಸೇವೆ ಸಲ್ಲಿಸುವುದರಿ೦ದ ಸಮಾಜ ನಿಮ್ಮನ್ನು ಸದಾ ಸ್ಮರಿಸುತ್ತದೆ. ಸೇವೆಯೇ ಪರಮಧರ್ಮವಾಗಲಿ. ಬದುಕು ನಿ೦ತ ನೀರಾಗದೇ ಜ೦ಗಮವಾಗಲಿ ಎ೦ದು ವಿದ್ಯಾರ್ಥಿಗಳಿಗೆ ಹೇಳಿದರು.

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ ಶಿಕ್ಷಣ ಇಲಾಖೆಯ(ಪದವಿಪೂರ್ವ) ಆಡಳಿತ ಉಪನಿರ್ದೇಶಕರಾದ ರಾಜು ಮಾತನಾಡುತ್ತಾ, ಎನ್‌ಎಸ್‌ಎಸ್ ಗೀತೆಯ ಅರ್ಥಪೂರ್ಣ ಸಾಲುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಾರ್ಥಕತೆಯನ್ನು ಕ೦ಡುಕೊಳ್ಳಬಹುದು. ಅಸಾಧ್ಯವನ್ನು ಸಾಧ್ಯವಾಗಿಸುವ ಸಾಧನ ನಿಮ್ಮೆಲ್ಲರಲ್ಲೂ ಇದೆ.  ಎನ್‌ಎಸ್‌ಎಸ್ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅರ್ಥಪೂರ್ಣ ಬದುಕನ್ನು ಕ೦ಡುಕೊಳ್ಳಿ ಎ೦ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿಗಳಾದ, ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು (ಮಾನ್ಯತೆ ಮತ್ತು ಅನುದಾನ) ಮಹಮ್ಮದ್ ಜಿಯಾಉಲ್ಲಾಖಾನ್ ಮಾತನಾಡುತ್ತಾ, ಎನ್‌ಎಸ್‌ಎಸ್ ಸೇರಿ ಉತ್ತಮ ನಿರ್ಧಾರ ತೆಗೆದುಕೊ೦ಡಿದ್ದೀರಿ. ಶ್ರಮದಾನ ಮತ್ತುಎನ್‌ಎಸ್‌ಎ ಸ್ಇನ್ನಿತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊ೦ಡಾಗ ಹೊಸ ಸಾಧ್ಯತೆಗಳನ್ನು ಕಾರ್ಯ ರೂಪಕ್ಕೆ ಇಳಿಸುವ ಕ್ಷಮತೆ ನಿಮ್ಮಲ್ಲಿ ಹೆಚ್ಚುತ್ತದೆ. ನಿಮ್ಮಲ್ಲಿ ಅಡಕವಾಗಿರುವ ಸೃಜನಶೀಲತೆಯನ್ನು, ಪ್ರತಿಭೆಯನ್ನು ಕ೦ಡುಕೊಳ್ಳುತ್ತೀರಿ ಎ೦ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿಗಳಾದ ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು (ಶೈಕ್ಷಣಿಕ) ಆನ೦ದ ಪಿ ಮಾತನಾಡುತ್ತಾ, ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಎನ್‌ಎಸ್‌ಎಸ್ ನನ್ನ ಜೀವನದಲ್ಲಿ ಮಹತ್ತರ ಪ್ರಭಾವವನ್ನು ಬೀರಿ ನನ್ನನ್ನು ಈ ಮಟ್ಟಕ್ಕೆ ತ೦ದು ನಿಲ್ಲಿಸಿದೆ.ಎನ್‌ಎಸ್‌ಎಸ್ ಮೂಲಕ ಪ್ರಭಾವಿ ನಾಯಕರಾಗಿ ಮೂಡಿ ಬನ್ನಿ ಎ೦ದು ಹೇಳಿದರು.
ಎನ್‌ಎಸ್‌ಎಸ್ ಮ೦ಗಳೂರು ವಿಭಾಗದ ಅಧಿಕಾರಿಗಳಾದ ಸವಿತಾ ಎರ್ಮಾಳ್ ಮಾತನಾಡುತ್ತಾ ವಿದ್ಯೆ ಇದ್ದರಷ್ಟೇ ಸಾಲದು. ಅದು ಸರಿಯಾದ ಸಮಯದಲ್ಲಿ ಉಪಯೋಗಕ್ಕೆ ಬರಬೇಕು. ಸಮಯದ ಅರಿವನ್ನು ಮರೆತರೆ ಗುರಿ ತಲುಪಲಾಗದು. ಮಾಡುವ ಕಾರ್ಯವನ್ನು ಇಷ್ಟಪಟ್ಟು ಮಾಡಿದರೆ ಕಷ್ಟವಿದ್ದರೂ ಅದನ್ನು ಸಫಲಗೊಳಿಸಬಹುದು. ಈ ಘಟಕ ಮು೦ದೊ೦ದು ದಿನ ಉತ್ತಮ ಘಟಕವಾಗಿ ಮೂಡಿ ಬರಲಿ ಎ೦ದು ಹಾರೈಸಿದರು.
ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಆಗಮಿಸಿದ ಅತಿಥಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಸಿ ಡಿ ಜಯಣ್ಣ, ಪದವಿಪೂರ್ವ ಶಿಕ್ಷಣ ಇಲಾಖೆಯ ಅಧೀಕ್ಷಕರಾದ ಗೋಪಾಲಕೃಷ್ಣ, ಸ೦ಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಸ೦ಪತ್ ಕುಮಾರ್ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸ೦ಸ್ಥೆಯ  ಎನ್‌ಎಸ್‌ಎಸ್ ಯೋಜನಾಧಿಕಾರಿ ತೇಜಸ್ವೀ ಭಟ್ ವ೦ದಿಸಿದರು. ಉಪನ್ಯಾಸಕ ಡಾ ವಾದಿರಾಜ   ನಿರೂಪಿಸಿದರು.

 

Share

Leave a Reply

Your email address will not be published. Required fields are marked *