ಮೂಡುಬಿದಿರೆಗೆ ಬರೋದಾದ್ರೆ ಈ ಬದಲಾವಣೆ ಗಮನಿಸಿ…

ಚೌತಿ ಮೆರವಣಿಗೆ – ಮೂಡುಬಿದಿರೆ ವಾಹನ ಸಂಚಾರದಲ್ಲಿ ಬದಲಾವಣೆ
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಕಡೆಯ ದಿನವಾದ ಶನಿವಾರ, ಭವ್ಯ ಶೋಭಾಯಾತ್ರೆಯ ಅಂಗವಾಗಿ ನಗರದಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ತಿಳಿಸಿದ್ದಾರೆ.
ಮಧ್ಯಾಹ್ನ 12 ಗಂಟೆಯಿ0ದ ಗಣೇಶ ವಿಸರ್ಜನೆ ಆಗುವವರೆಗೆ ಮೂಡುಬಿದಿರೆ ಪೇಟೆಯಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಲಾಗಿದೆ. ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆ ಸಂಚರಿಸುವ ವಾಹನಗಳು ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲಿನಿಂದಾಗಿ ಸುಭಾಸ್‌ನಗರ ದ್ವಾರದ ಬಳಿ ಬಲಕ್ಕೆ ತಿರುಗಿ ಅಮನೊಟ್ಟು ಕ್ರಾಸ್ ರಸ್ತೆ ಮೂಲಕ ಸಂಚರಿಸುವುದು.

ಬಂಟ್ವಾಳ ಕಡೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಕೀರ್ತಿನಗರ ಜಂಕ್ಷನ್‌ನಿ0ದ ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲುನಿಂದಾಗಿ ಸಭಾಸ್ ನಗರ ದ್ವಾರದ ಬಳಿ ಬಲಕ್ಕೆ ತಿರುಗಿ ಅಮನೊಟ್ಟು ಕ್ರಾಸ್ ರಸ್ತೆ ಮೂಲಕ ಸಂಚರಿಸುವುದು.

ಶಿರ್ತಾಡಿ ಕಡೆಯಿಂದ ಮಂಗಳೂರು-ಮೂಲ್ಕಿ ಕಡೆ ಹೋಗುವ ವಾಹನಗಳು ಜೈನ್ ಪೇಟೆಯಿಂದ ಅಲಂಗಾರು ಮಾರ್ಗವಾಗಿ ರಿಂಗ್ ರೋಡ್ ಮುಖಾಂತರ ತೆರಳುವುದು. ಕಾರ್ಕಳ ಕಡೆಯಿಂದ ಬೆಳ್ತಂಗಡಿ ಮತ್ತು ಬಿ.ಸಿ.ರೋಡ್ ಕಡೆಗೆ ಹೋಗುವ ವಾಹನಗಳು ಜೈನ್ ಪೇಟೆ ಕ್ರಾಸ್ ರಸ್ತೆ ಮೂಲಕ ಕೋಟೆಬಾಗಿಲು ಕೊಡಂಗಲ್ಲು ಜಂಕ್ಷನ್ ರಸ್ತೆ ಮೂಲಕ ಸಂಚರಿಸುವುದು. ಕಾರ್ಕಳ ಕಡೆಯಿಂದ ಮಂಗಳೂರು, ಮೂಲ್ಕಿ ಕಡೆಗೆ ಹೋಗುವ ವಾಹನಗಳು ಅಲಂಗಾರು ಜಂಕ್ಷನ್ ಬಳಿ ಬಲಕ್ಕೆ ತಿರುಗಿ ರಿಂಗ್ ರೋಡ್ ರಸ್ತೆಯಲ್ಲಿ ಸಂಚರಿಸುವುದು. ಹಳೆ ಪೊಲೀಸ್ ಠಾಣೆಯಿಂದ ನಿಶ್ಮಿತಾ ಸರ್ಕಲ್ ವರೆಗೆ ಮುಖ್ಯ ರಸ್ತೆಯಲ್ಲಿ ಮೇಲ್ಕಂಡ ಅವಧಿಯಲ್ಲಿ ಸಂಚಾರ ನಿಷೇಧಿಸಲಾಗಿದೆ.

ಮಂಗಳೂರು ಕಡೆಯಿಂದ ಕಾರ್ಕಳ ಕೊಡ್ಯಡ್ಕ ಕಡೆಗೆ ಹೋಗುವ ವಾಹನಗಳು ಸ್ವರಾಜ್ಯ ಮೈದಾನ,ರಿಂಗ್ ರೋಡ್ ನಲ್ಲಿ ಸಂಚರಿಸಿ ಅಲಂಗಾರು ಜಂಕ್ಷನ್ ಮೂಲಕ ಸಂಚರಿಸುವುದು. ಏಕಮುಖ ರಸ್ತೆಯಾಗಿರುವ ಅಮರಶ್ರೀ ಟಾಕೀಸು ರಸ್ತೆಯನ್ನು ಮೇಲ್ಕಂಡ ಅವಧಿಗೆ ದ್ವಿಮುಖ ರಸ್ತೆಯಾಗಿ ಮಾರ್ಪಾಡು ಮಾಡಲಾಗಿದೆ. ಮಂಗಳೂರಿನಿ0ದ ಮೂಡುಬಿದಿರೆ ಕಡೆಗೆ ಬರುವ ವಾಹನಗಳು ವಿದ್ಯಾಗಿರಿಯ ಮಾಸ್ತಿಕಟ್ಟೆ ಕ್ರಾಸ್ ರಸ್ತೆ ಮಾರ್ಗವಾಗಿ ಲಾವಂತಬೆಟ್ಟು ರಸ್ತೆಯಲ್ಲಿ ಸಂಚರಿಸುವುದು. ಗಣೇಶೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳಿಗೆ ತಾಲೂಕು ಕಚೇರಿ ಮುಂಭಾಗದ ಮೈದಾನದಲ್ಲಿ ತಾತ್ಕಾಲಿಕ ಪಾರ್ಕಿಂಗ್ ಸ್ಥಳವಾಗಿ ಕಲ್ಪಿಸಲಾಗಿದೆ.

Share

Leave a Reply

Your email address will not be published. Required fields are marked *